
ಕಳೆದುಕೊಂಡಿದ್ದೇನೆ ನಾನು ನೀಡುವ ಎಲ್ಲಾ ಸುಖಗಳನ್ನು ನೀಡುತ್ತ ಕಾಡುತ್ತ ಹಾಡುತ್ತ ಸವೆಯುವ ಎಲ್ಲಾ ಚಪ್ಪರಿಕೆಗಳನ್ನು ಮುಖ ಒಳೆಯದೇ ಮನಸ್ಸು ಕೂಡಾ ಚಂದ ತೆಳು ಮೋಡ ಆಕಾಶದಲಿ ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ ಹಾಯಿಕೊಡುವ ಎಲ್ಲಾ ಬಿಸುಪುಗಳನ್ನು...
ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ ತನ್ನ ಕಾಡಿದ ಅದೇ ಬಾಲ್ಯದ ನೋವು ಇವರ ಕಾಡದಿರಲಿ ಎಂದು. ಕಾಡುತ್ತವೆ ನೆನಪು ನಿನ್ನೆ ನೆನೆಯಿಟ್ಟ ಕಾಳುಗಳು ಇಂದು ಮೊಳಕೆಯೊಡೆದಿವೆ ಜೋಪಾನವಾಗಿ ತೆಗೆದ...
ಗಂಡ ಹಳೆಯ ಪ್ರೇಯಸಿಯ ನೆನಪುಗಳನ್ನು ಎದೆಗೊತ್ತಿಕೊಂಡು ಸಂತೈಸುತ್ತಿದ್ದಾನೆ. ಹೆಂಡತಿ- ಒಂಟಿ ಬಾವಲಿಯ ರೆಕ್ಕೆ ಬಡಿತಗಳನ್ನು ಎಣಿಸುತ್ತಿದ್ದಾಳೆ. ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ ಪ್ರೀತಿ ಸತ್ತಿದೆ ಮನೆಯಲ್ಲಿ. ಗಂಡ ಸವೆದ ಕನಸುಗಳನ್ನು ಗುಡ...
ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ ಯಾವಾಗ ನೋಡು ಈಗಂದುಕೊಂಡದ್ದನ್ನು ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ ಕೆರೆಯುವುದು ಹಗಲಿಡೀ ಕಂಡಕಂಡವರಿಗೆ ಕೊರೆಯುವುದು ರಾತ್ರಿಯೆಲ್ಲಾ ಗೊರೆಯುವುದು ಆಗಾಗ ಏನಾದರೂ ಒಂದಿಷ್ಟು ಬರೆಯುವು...
ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ ಎಲ್ಲ ಸುರಿದು ದುಡಿದಿದ್ದೇವೆ ಹಗಲು ಇರುಳೆನ್ನದೇ ನಿದ್ದೆ...
-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು ಇದೆ ಎಂದು ತಿಳಿದಾಗ ನಿಶಬ್...













