ಯೋಗ ಪುಷ್ಪಾ ಮೊಗ್ಗು ಬಿಚ್ಚಲಿ
ಜೋಗ ಶಕ್ತಿಯ ಚಿಮ್ಮಲಿ,

ತ್ಯಾಗ ದೇವತೆ ತಪದ ದೇವತೆ
ಆಗು ಭಾರತ ಪುರುಷನೀಂ
ಕಲಹ ಯುಗದಿಂ ಕರುಣ ಯುಗಕೆ
ಶರಣು ಶರಣು ಎನ್ನು ನೀಂ

ಸಾಕು ಕತ್ತಲೆ ಶವದ ಬತ್ತಲೆ
ನೂಕು ಕಾವಳ ಕಲಿಯುಗಾ
ತಾಗು ಯೋಗಕೆ ಬಾಗು ಭಾಗ್ಯಕೆ
ಜೀಕು ಸತ್ಯದ ಶಿವಯುಗಾ

ಮನುಜರಾತ್ಮರು ದನುಜದೂರರು
ದೇವ ಲೋಕವೆ ನಮ್ಮದು
ಕರುಣೆ ತುಂಬಿ ಶರಣು ತುಂಬಿ
ಹಾಡು ಹೊಸಯುಗ ನಮ್ಮದು
*****