
ನಿನ್ನೆ ರಾತ್ರಿ ನಿನ್ನ ಮೇಲೆ ಸಿಟ್ಟು ಬಂದು ರಾತ್ರಿಯನ್ನೆಲ್ಲ ಬಳಿದು ಸವರಿ ಒಂದು ಶೀಷೆಗೆ ಹಾಕಿಟ್ಟಿದ್ದೇನೆ. ಇನ್ನು ಮೇಲೆ ಸದಾ ಬರೀ ಬೆಳಕೇ ಇರುತ್ತೆ, ನೀನು ಬಚ್ಚಿಟ್ಟುಕೊಳ್ಳುವುದಕ್ಕೆ ಕೂಡಾ ಒಂದು ಚೂರೂ ಕತ್ತಲು ಸಿಗಲ್ಲ. ನೀನು ತತ್ತರಿಸಬೇಕು,...
ನನ್ನ ಕೂಸು ಗಿಣಿಯ ಕೂಸು ಹಸಿದು ಅಬ್ಬಾ ಎನುವದು ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ ಅಂಬೆಗಾಲಿಲೆ ಬರುವದು ಅಂಗಿ ಟೊಪ್ಪಿಗಿ ಮುತ್ತು ಗೊಂಬಿ ಕೊಂಡು ಕೂಸನೆ ಮರೆತೆನು ಊರ ಮನೆಯಾ ಕೂಸು ಕಾಣುತ ನನ್ನ ಕೂಸೆ ಎಂದೆನು ಮನೆಯ ಕೂಸು ಮನೆಯಲುಳಿಯಿತು ಓಣಿ ಓಣಿಯ...
ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು ಹದ ಬೇರೆ. ಒಂದೆ ಅನುಭವ, ಬೇರೆ ಹೊರ ಒಡಲು. ಚಿತ್ತ ಮೆಲುಕಾಡಿಸಿದ ಸುಖ ದುಃಖ ಧಗೆಯೆಲ್ಲ ಒಂದೆ ಇಡಿ ಲ...
ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು ಎಳೆ ಚಿಗುರಿನ್ಹಾಂಗೆ || ಮೊಗ್ಗಲ್ಲಿ ನೀನು ಎಳೆ...
ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ...













