
ತಾಯಿ ಹೆಂಡತಿ ಮಗಳು ಗೆಳತಿ ತೋರಿಕೆಯಲ್ಲಿ ಒಂದೆ ವೃಕ್ಷದ ಬೇರೆ ಬೇರೆ ಕೊಂಬೆ ಹಸಿಸೌದೆ ಬೆರಣಿ ಕಕ್ಕುವ ದಟ್ಟಹೊಗೆ ನಡುವೆ ನಿಧಾನ ಹಣಿಕುವ ಬೆಂಕಿ ಕುಡಿಯಂತೆ ಚಿಗಿತವಳು; ಇಷ್ಟಿಷ್ಟೆ ಗೆಲ್ಲುತ್ತ ಕುಡಿ ಕಾಂಡವಾಗುತ್ತ ತುತ್ತಲಾರದ ಜ್ವಾಲೆಯಾಗಿ ಎದ್ದವ...
ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ ಹೇಳಲೆ ಯಾರಂತ ತೋರಲೆ ಎ...
ಅನುಕರುಣೆಯೆಂಬ ಬಿಸಿಲಗುದುರೆಯನೇರಿ | ಸಮಯದಿಂದೆ ಓಡುತಿರುವ ಅಲ್ಪ ಬುದ್ದಿಮತಿಗಳೇ| ಜೀವನದ ಮೌಲ್ಯಮರೆತಿರಿ ಅದನೇ ನಿಮ್ಮ ಮಕ್ಕಳಿಗೂ ಕಲಿಸಿ ಮುಂದೆಂದು ಕೊರಗದಿರಿ|| ಹೊಟ್ಟೆಹೊರೆವ ವಿದ್ಯೆ ಕಲಿತು ಜೀವನದ ವಿದ್ಯೆ ಮರೆತು| ಹಣದ ಹುಚ್ಚು ಹೆಚ್ಚಿ ಹೆಚ...
ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನ...
ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ ಬೀಜ ಹಾಕುವುದೇನು ಸಾ...
ಒಂದು ಹಣತೆ ಸಾಕು ಮನೆಯ ಬೆಳಗಲು ಕೋಟಿ ಕಿರಣಗಳೆ ಬೇಕು ತಾಯಿನಾಡ ಬೆಳಗಲು || ಕೋಟಿ ಕಿರಣಗಳಲಿ ಬೇಕು ಸ್ವಚ್ಛಂದ ಮನಸ್ಸು ಮನಸ್ಸುಗಳಿಗೆ ಬೇಕು ತಾಯಿ ನುಡಿ ಆರಾಧಿಸುವ ಮನಸು || ನಮ್ಮ ಮನೆ ಅಲ್ಲ ಇದು ನಿಮ್ಮ ಮನೆ ಅಲ್ಲ ಒಂದಾಗಿ ಬಾಳುವ ನಮ್ಮೆಲ್ಲರ ಮನ...
ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು ನಕ್ಷತ್ರವಾಯಿತು ಶಬ್ಧ. ನಾದಲಯಗಳ ಜೋಡು ಸಾರೋಟು ಹತ್ತಿ ರೂಪಕದ ಮೆರವಣಿಗೆ ಬರವಣಿಗೆ; ಬಡ ಪದವ ಕವಿತೆ ಮಾಡುವ ಅತಾರ್ಕಿ...













