ಎನ್ನ ಕಾಯೋ ಕರುಣಾಂತರಂಗ
ನಿನ್ನನೇ ಬೇಡುವೆ
ಭಕ್ತರ ಭಕ್ತನೂ ನೀನೆನಿಸಿ
ನಿರುತವೂ ಕಾಯೋ ಕರುಣೆಯ ಹರಸಿ ||ಎ||

ಬೇಡುವೆ ನಿನ್ನ ದಯಾಸಿಂಧು
ಅನುವ್ರತವೂ ನಿನ್ನ ಧ್ಯಾನದಲ್ಲಿರಿಸು ||ಎ||

ತಂದೆಯು ನೀನೇ ತಾಯಿಯು ನೀನೇ
ಬಂಧುಬಳಗ ಸಖಭಾವನೂ ನೀನೇ ||ಎ||

ಪಾಪಗಳ ತೊರೆದು ಪಾವನವಾಗಿಸು
ನಿತ್ಯವು ನಿನ್ನ ಸತ್ಯದಲ್ಲಿರಿಸು ||ಎ||

ಭವಸಾಗರ ಭವರೋಗಗಳ ತಡೆದು
ಬಂಧನವ ಬಿಡಿಸಿ ಭಕುತಿಯಲ್ಲಿರಿಸು ||ಎ||

ನಿನ್ನ ಅರಿಯದಾದೆ ಮಾಯಾಮುಸುಕಿನಲಿ
ದೀನಳ ಮೊರೆಯ ಕೇಳಲೋ ಹರಿಯೇ ||ಎ||

ಹಂಸಾವಾಹನ ಪರಮಾತ್ಮ ನೀನೇ
ಗರುಡಾದ್ರಿ ಗಮನ ಲಕುಮೀಶನೇ ||
*****