ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ
ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ
ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ
ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ
ನೋಡಿದರೆ ಇದು ನರಕದ ಡಿಲಕ್ಸ್ ಡಿಪಾರ್ಟ್ಮೆಂಟು ಅನ್ನಿಸುತ್ತದೆ; ಕುದಿಯುವ ಎಣ್ಣೆ
ಕೊಪ್ಪರಿಗೆ ಇಲ್ಲ. ಮೈ ಕೊಯ್ಯುವ ಗರಗಸವಿಲ್ಲ. ಧಗಧಗ ಉರಿಯುವ ಬೆಂಕಿ
ನಾಲಗೆಗಳಿಲ್ಲ.
ವರ್‍ಷ ಪೂರ್ತಿ ಕಾವ್ಯ ಸ್ಪರ್ಧೆ, ಸಂಗೀತೋತ್ಸವ, ಕಲಾ ಮೇಳಗಳೇ. ಇವಕ್ಕೆ ಕ್ಲೈಮಾಕ್ಸ್
ಎಂಬುದಿಲ್ಲ. ಶಾಶ್ವತವಾಗಿ, ಬಹುಮಟ್ಟಿಗೆ ಅನಂತವಾಗಿ ಅಖಂಡವಾದ ಕ್ಲೈಮಾಕ್ಸೇ
ಯಾವಾಗಲೂ. ತಿಂಗಳಿಗೊಂದು ಹೊಸ ಪಂಥ, ಹೊಸ ಶೈಲಿಯ ಅವಿಷ್ಕಾರ.
ಅಗ್ರಗಾಮಿ ಕವಿ ಕಲಾವಿದರ ಮುನ್ನೆಡೆಯನ್ನು ತಡೆಯುವವರೇ ಇಲ್ಲ.
ನರಕದೊಡೆಯ ಬೇಲ್ಸೆಬಬ್‍ನಿಗೆ ಕಲೆಯನ್ನು ಕಂಡರೆ ತುಂಬ ಪ್ರೀತಿ. ನರಕದ ಮೇಳ,
ನರಕದ ಕವಿಗಳು, ನರಕದ ಸಂಗೀತಗಾರರು ಇವರೆಲ್ಲ ಸ್ವರ್ಗದಲ್ಲಿರುವ ಇಂಥವರಿಗಿಂತ
ತುಂಬ
ಅತ್ಯುತ್ತಮ ಎಂದು ಜಂಬಕೊಚ್ಚಿಕೊಳ್ಳಲು ಶುರುಮಾಡಿದ್ದಾನೆ. ಅತ್ಯುತ್ತಮ ಕಲೆ ಇದ್ದರೆ
ಅತ್ಕುತ್ತಮ ಸರ್ಕಾರವಿರುತ್ತದೆ. ಸತ್ಯ, ಪರಮ ಸತ್ಯ. ಸದ್ಯದಲ್ಲೆ ನರಕದ ಕಲಾವಿದರಿಗೂ
ಸ್ವರ್ಗದವರಿಗೂ ನಡುವೆ ಒಂದು ಸ್ಪರ್ಧೆ ಇದೆ, ಎರಡು ವಿಶ್ವಗಳ ಮಹಾ ಸರ್ಧೆ.
ಡಾಂಟೆ, ಫ್ರಾ ಏಂಜಲಿಕೋ, ಬಾಖ್ ಎಷ್ಟು ಮಟ್ಟಿಗೆ ಉಳಿದುಕೊಳ್ಳುತಾರೋ ನೋಡಬೇಕು.
ನರಕದೊಡೆಯ ಕಲೆಗೆ ಸಾಹಿತ್ಯಕ್ಕೆ ತುಂಬ ಪ್ರೋತ್ಸಾಹ ಕೊಡುತ್ತಾನೆ. ಕಲಾವಿದರಿಗೆ
ಶಾಂತಿ, ಅತ್ಯುತ್ತಮ ಆಹಾರ, ನರಕದ ಬದುಕಿನ ತಳಮಳ ತಾಗದಂಥ ಪ್ರತ್ಯೇಕ ಪರಿಪೂರ್ಣ
ಏಕಾಂತ ಒದಗಿಸಿದ್ದಾನೆ.
*****
ಮೂಲ: ಝ್ಬಿಗ್ನ್ಯೂ ಹರ್‍ಬರ್‍ಟ್ / Zbigniew Herbert

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎನ್ನ ಕಾಯೋ
Next post ವಾತಾಪಿ ಜೀರ್ಣೋಭವ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…