ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ...

ಕೋಳಿ

ಕೋಳಿ ಅತ್ಯುತ್ತಮ ನಿದರ್ಶನ -ಸತತವಾಗಿ ಮನುಷ್ಯರೊಡನೆ ಬದುಕಿದರೆ ಏನಾಗುತ್ತೆದೆನ್ನುವುದಕ್ಕೆ. ಹಕ್ಕಿಯ ಲಾಘವ, ಗಾಂಭೀರ್ಯ ಕಳೆದುಕೊಂಡಿದೆ ಕೋಳಿ. ಅಭಿರುಚಿ ಹೀನ ದೊಡ್ಡ ಹ್ಯಾಟಿನಂತೆ ಅದರ ಅಂಡಿನ ಮೇಲೆ ಉದ್ದೋ ಉದ್ದ ಪುಕ್ಕ. ಅಪರೂಪಕ್ಕೊಮ್ಮೆ ಭಾವೊನ್ಮತ್ತ ಕ್ಷಣದಲ್ಲಿ,...