ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ
ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ||

ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ||

ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ
ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧||

ಕಳವ ಕಳಕೊಂಡೆಲ್ಲೊ ಕಾಮಣ್ಣಾ
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ||೨||

ನೀರೊಳಗಿ ಕರಗಿ ಸುಟ್ಟಂಗಾತೋ ಸುಣ್ಣಾ
ಶಿಶುನಾಳ ಶರೀಫಗೆ ಹಾಲು ಅನ್ನ ತಪ್ಪದೆ ಅರ್ಪಿಸುವೆ ಮುಕ್ಕಣ್ಣಾ ||೩||

*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ
Next post ಒಳ್ಳೇ ನಾರಿ ಕಂಡೆ ಈಗಲೇ

ಸಣ್ಣ ಕತೆ