ಒಳ್ಳೇ ನಾರಿ ಕಂಡೆ ಈಗಲೇ
ಒಳ್ಳೇ ನಾರಿ ಕಂಡೆ ||ಪ||

ಇಳೆಯ ತಳದಿ ಕಳೆವರ ಭಲೆ
ಋಷಿಗಳ ಮರುಳು ಮಾಡುವ ||ಅ.ಪ.||

ಕೈಯು ಕಾಲು ಇಲ್ಲಾ
ಮೈಯೊಳು ಉಸುರು ಅಡಗಿತಲ್ಲಾ
ವಿಷಯಸುಖದ ಪರಮಾತ್ಮ ಬ್ರಹ್ಮೋದಯ
ನಿಶಿಕರದೊಳು ನಲಿದಾಡುತಿಹಳೋ ||೧||

ಮುಟ್ಟಲು ಕೊಲ್ಲುವಳೋ ಕಾಮನ
ಕಟ್ಟಿ ಅಳುತಿಹಳೋ
ಬಟ್ಟ ಕುಚಕ ಬರೆದಿಟ್ಟ ಕುಪ್ಪಸಕ
ನಟ್ಟ ಮನಸು ನಡೆಗೆಟ್ಟು ನಿಂತಿತು ||೨||

ವಸುಧೆಯೊಳಗೆ ಇವಳು
ಶಿಶುನಾಳಧೀಶನ ಒಲಿಸಿದಳೋ
ಪಸರಿಸಿ ಗುಡಿಪುರ
ಅಸಮ ರಸಿಕರಿಗೆ ಗುರುಗೋವಿಂದನ ||೩||

****