Home / ಕವನ / ಕವಿತೆ

ಕವಿತೆ

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ ನಡೆದಾಕೆ| ಅವ್ವ ಈ ನೆರೆಹೊರೆಯವರ ನೆಚ್ಚಿನಾಕೆ| ಅವ್ವ ಹರಿದ ಸೀರೆಯ ಗಂಟಿಕ್ಕಿ ಉಟ್ಟು ಕೂಲಿಮ...

ಕೊಡಬೇಡವೋ ಶಿವನೆ! ಕೂಸು ಮುದ್ದ ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ! ಅವರು ಇವರು ಯಾರ ಮಾತು ಏಕೆ ? ಅಪ್ಪ ಯಾರೋ ಗೊತ್ತಿಲ್ಲ ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು....

ಶಿಕ್ಷೆ ಏನೆಂಬುದು ಹೂವಿಗೆ ತಿಳಿಯದು ತಾನೆ ರಕ್ಷಿಸಿಕೊಳ್ಳಲು ಹೂವು ಅರಿಯದು ಕತ್ತಿಯ ಅಲಗಿನಿಂದ ತಿವಿದರೂ ಹೂವು ತುಂಬು ನಗೆಯನ್ನೆ ಸುರಿಸುವುದು ಅಂತೆಯೆ ದೇವರೇ ಹೂವಿನ ಪಾಲನೆಗೆ ಪಣತೊಟ್ಟಿದ್ದಾನೆ ಚಿಟ್ಟೆಯಾಗಿ ಮರಿದುಂಬಿಯಾಗಿ ಸದಾ ಹೂದೋಟಗಳಲ್ಲಿ ...

ಕಡಲ ತಡಿಯಲ್ಲಿ ನಿಂತು ವಿರುದ್ಧ ಮುಖವಾಗಿ ಚಿತ್ತೈಸಿದರೆ ಎಂಥ ಸಹಜತೆ ಲ್ಯಾಂಡಸ್ಕೇಪ್ ಮಾಡಿದ ಮಹಾನ್ ತೋಟಗಾರನೊಬ್ಬ ಅಂಚಂಚನ್ನು ಬಿಡದೆ ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ. ನೋಡುತ್ತ ಮೈಮೇಲೆ ಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದ ಏರುವ ಇಳ...

ತವರೂರ ಹಾದಿಯಲಿ ಹೂವು ಚೆಲ್ಲಿ ಎನ್ನ ಮನೆಯ ಬೆಳಗುವಲ್ಲಿ ಹೊನ್ನ ಕುಡಿಯ ತಾರೆಂದು ಒಡಲ ಮಡಿಲ ತುಂಬಿ ಬಾರೆಂದು ಹೇಳಿ ಹೋದಿರಿ! ಎನ್ನ ಸಖಾ ನಾನಿಲುವೇನೆ || ನಿಮ್ಮ ಮನೆಯ ಬೆಳಗುವ ದೀಪವೆಂದೂ ಆರದೆ ಉಳಿಸುವೆ ನಿಮ್ಮದೇ ಭಾವದುಸಿರಲಿ ನಿಮ್ಮ ಒಲವ ಕಾಯುವ...

ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ. ಓವರಿಗೆ ಎರಡೆರಡು ಫೋರುಗಳ ಗುಡುಗು ನಡುವೆ ಸಿಕ್ಸರ್ ಸಿಡಿಲು, ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ ಮೈದಾನದಲ್ಲೆ ಕಣ್ಣಿದಿರು! ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ ಕುಣಿದು ಧೀಂಕಿಡುವ ಸಹಸ್ರಾರು ಭಕ್ತ...

ಈಚಲ ಮರದಡಿ ಈಶ್ವರ ಭಟ್ಟರು ಧೋತರ ಹರಡಿ ಕುಳಿತೇ ಬಿಟ್ಟರು ಆಕಡೆ ನೋಡಿ ಈಕಡೆ ನೋಡಿ ಮೊಗೆದೇ ಬಿಟ್ಟರು ಕುಡಿದೇ ಬಿಟ್ಟರು ಏನದು ಗಡಿಗೆ ಏನದರೊಳಗೆ ಓಹೋ ಹುಳ್ಳಗೆ ತಿಳಿಯಿತು ಮಜ್ಜಿಗೆ ನೋಡಿದರುಂಟು ಕೇಳಿದರುಂಟು ಇಷ್ಟಕ್ಕೂ ಇದು ಯಾರಪ್ಪನ ಗಂಟು ಈಚಲ ನ...

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕ...

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು ನಮ್ಮ ನೆಚ್ಚಿ ಬರುವಂತೆ ನೋವು ಸಹ ಸದಾ ಸುತ...

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು … ಕೆಟ್ಟದ್ದು ಪುಸಕ್ಕನೆ ಕಣ್ಣಿ ಹರಿದ ದನದಂತೆ ಹಾರಿ ತನ್ನದೇಯೆಂಬಂತೆ ಮನಸ್ವಿ ಅನುಭವ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...