ಶಿಕ್ಷೆ ಏನೆಂಬುದು
ಹೂವಿಗೆ ತಿಳಿಯದು

ತಾನೆ ರಕ್ಷಿಸಿಕೊಳ್ಳಲು
ಹೂವು ಅರಿಯದು

ಕತ್ತಿಯ ಅಲಗಿನಿಂದ
ತಿವಿದರೂ ಹೂವು
ತುಂಬು ನಗೆಯನ್ನೆ
ಸುರಿಸುವುದು

ಅಂತೆಯೆ
ದೇವರೇ ಹೂವಿನ
ಪಾಲನೆಗೆ
ಪಣತೊಟ್ಟಿದ್ದಾನೆ

ಚಿಟ್ಟೆಯಾಗಿ
ಮರಿದುಂಬಿಯಾಗಿ
ಸದಾ ಹೂದೋಟಗಳಲ್ಲಿ
ನೆಲೆಸಿದ್ದಾನೆ

ಹೂವಿಗೆ
ರೂಪ ಸ್ಪರ್ಶ ರಸ
ಸುಗಂಧದ
ಮಾಯಾ ಜಾಲವಿತ್ತು
ಹರಸಿದ್ದಾನೆ.
*****