ಅವ್ವ

ಅವ್ವ ಹತ್ತು ತಿಂಗಳು
ಹೊತ್ತು ಹೆತ್ತಾಕೆ |
ಅವ್ವ ಅನೇಕ ಕಷ್ಟಗಳ
ನುಂಗಿ ನಡೆದಾಕೆ |
ಅವ್ವ ಅಪ್ಪನ ಎಲ್ಲವನೂ
ಸಹಿಸಿಕೊಂಡಾಕೆ||

ಅವ್ವ ಈ ಸಮಾಜಕ್ಕೆ
ಅಂಜಿ ನಡೆದಾಕೆ|
ಅವ್ವ ಈ ನೆರೆಹೊರೆಯವರ
ನೆಚ್ಚಿನಾಕೆ|
ಅವ್ವ ಹರಿದ ಸೀರೆಯ
ಗಂಟಿಕ್ಕಿ ಉಟ್ಟು
ಕೂಲಿಮಾಡಿ
ನಮ್ಮನ್ನೆಲ್ಲಾ
ಸಾಕಿ ಸಲಹಿದಾಕೆ||

ಅವ್ವ ಅಂತರಂಗಶುದ್ಧಿ
ಉಳ್ಳಾಕೆ
ಅವ್ವ ಕಡು ವಾಸ್ತವವ
ಒಪ್ಪಿಕೊಂಡಾಕೆ|
ಅವ್ವ ಸ್ವಾಭಿಮಾನಿಯಾಗಿ
ಬದುಕಿದಾಕೆ
ಅವ್ವ ಭವಿಷ್ಯದಲಿ
ಅಪಾರ ನಂಬಿಕೆ ಇಟ್ಟಾಕೆ||

ಅವ್ವ ತಾನೊಂದು
ಕಾರ್ಯಗಾರವಾದಕೆ|
ಅವ್ವ ಅಷ್ಟೇನು ಓದದೆ
ಜೀವನದನುಭವದೇ
ಮಹಾ ತತ್ವಜಾನಿ ಆದಾಕೆ||

ಅವ್ವ ಕಾಮಧೇನು
ಕಲ್ಪವೃಕ್ಷವಾದಾಕೆ|
ಅವ್ವ ಅನೇಕ
ಗುರು ಹಿರಿಯರ
ಗಣ್ಯರ ಹೆತ್ತು
ಈ ಭೂಮಿಯ ಋಣ
ತೀರಿಸಿದಾಕೆ||

ಇರಲಿ ನನ್ನದೊಂದು
ಕೋಟಿ ನಮನ ಆಕೆಗೆ|
ಪ್ರಾರ್ಥಿಸುವೆ ನಾ
ಮತ್ತೊಮ್ಮೆ ಹುಟ್ಟಿಬರಲಿ ಆಕೆ|
ಆಶಿಸುವೆ ನಾ ಹುಟ್ಟಲಿಕ್ಕೆ
ಅವಳ ಗರ್ಭಗುಡಿಯಲಿ
ಮತ್ತಷ್ಟು ಮೇಲೇರಲಿಕ್ಕೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸುಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫

ಸಣ್ಣ ಕತೆ

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ತಿಮ್ಮರಾಯಪ್ಪನ ಬುದ್ಧಿವಾದ

  ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…