ಜಂಗಮ ಹಸಿವೆಗೆ
ಆಲಯ ಕಟ್ಟುವುದು ಬೇಕಿಲ್ಲ.
ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ
ಮನಸು ಕೊಟ್ಟಿಲ್ಲ.
ಜಂಗಮದ ಬಯಲಲಿ
ಸ್ಥಿರ ಆಲಯ ಕಟ್ಟುತ್ತದೆ.
ರೊಟ್ಟಿ ಅಳಿಯುತ್ತದೆ
ಸೃಷ್ಟಿಯಂತಿಮ ಸತ್ಯದ
ಸ್ಥಾವರ ಉಳಿಯುತ್ತದೆ.
*****