Home / ಕವನ / ಕವಿತೆ

ಕವಿತೆ

ಮಾಲಕಂಸ ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!” ಜಡಭಾವದಿಂದ ಎಳೆದಿಡುತಲಡಿಗಳನು ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?” ಕಿರುನಗೆಯ ನಗುತಮ್ಮ ಹೊರಮನೆಗೆ ಕರೆ...

ನಾನು ನಿನಗೆ ಋಣಿಯಾಗಿರಲೇ ಬೇಕು ನನ್ನದೆಂಬುದೇನಿದೆ ಇಲ್ಲಿ! ಎಲ್ಲಾ ನಿನ್ನಯಾ ಒಡೆತನದಲ್ಲಿರುವಾಗ ಹರಿಯೇ|| ನೀನೇ ನಮ್ಮೆಲ್ಲರ ಕೃಪಾಪೋಷಕನಾಗಿರುವಾಗ| ನೀನು ನಮ್ಮೆಲ್ಲರ ತಿದ್ದಿ ತೀಡಿ ರೂಪಿಸುತ್ತಿರುವಾಗ| ಜೀವ ಜಂಗುಳಿಗೆ ಅನ್ನಾದಿಗಳ ಸೃಷ್ಟಿಸುತಿರ...

ಕತ್ತಲೆಲ್ಲ ಬೆತ್ತಲಾಗಿ ಬೆತ್ತಲೆಲ್ಲ ಬೆಳಗಾಗಿ ಕೆಂಪಾಗಲಿ ಕಪ್ಪು ನೆಲ. ಛಿದ್ರ ಛಿದ್ರವಾಗಲಿ ಬೇರು ಬೂದಿಯಾಗಲಿ ತುಳಿದು ನಗುವ ಜಾಲ. ಗುಡಿಸಲಿನ ಗರಿಗಳಿಂದ ಮನೆ ಮನೆಯ ಮನಸಿನಿಂದ ಹಾದಿ ಹೂಲದ ಎದೆಗಳಿಂದ ಹುಟ್ಟಿ ಬರಲಿ ಇಲ್ಲಿ ಹೋರಾಟದ ಹಾಡು. ಅಸ್ಪೃಶ...

ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ? ಕತ್ತಲೆ ಹಿನ್ನೆಲೆಯಾಗಿ...

ಈಚಲ ಮರದಡಿ ಮಜ್ಜಿಗೆ ಕುಡಿದರೆ ಕಳ್ಳಾಯಿತೋ ದೇವ ಸುಳ್ಳರೆದುರಿಗೆ ಸತ್ಯವ ನುಡಿದರೆ ಅಸತ್ಯವಾಯಿತೋ ದೇವ ತಾವರೆ ಕೀಳಲು ನೀರಿಗೆ ಹೋದರೆ ಕೆಸರಲಿ ಬಿದ್ದೆನೋ ದೇವ ಕೇದಿಗೆ ಕೊಯ್ಯಲು ಪೊದರಿಗೆ ಹೋದರೆ ಮುಳ್ಳು ಹೊದ್ದೆನೋ ದೇವ ಕನ್ನಡಿಯಲಿ ಮುಖ ನೋಡುವೆನೆ...

ಗುಬ್ಬಕ್ಕ ಗುಬ್ಬಕ್ಕ ಎಲ್ಲಿಗೆ ಹೋಗಿದ್ದೆಯಕ್ಕ? ನನ್ನೊಡನಾಡಲು ಬಾರಕ್ಕ ನನಗೂ ಎರಡು ರೆಕ್ಕೆ ಹಚ್ಚಕ್ಕ ಗುಬ್ಬಕ್ಕ ಗುಬ್ಬಕ್ಕ ನೀ ಕಣ್ಣಿಗೆ ಕಾಣಲಿಲ್ಲೇತಕ್ಕ? ನನ್ನ ಹೃದಯ ಹೊರಗೆ ಬಂದಂತಾಯ್ತಕ್ಕ ನಿನ್ನ ಸಂಗಡ ನಾನು ಇರುವೆನಕ್ಕ ಗುಬ್ಬಕ್ಕ ಗುಬ್ಬಕ್ಕ...

ನನ್ನಾಕೆ ಊರಿಗೆ ಹೋಗಿ ಒಂದೆರಡು ದಿನಗಳು ಕಳೆಯೆ ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು ಏನು ತಿನ್ನಲಿ? ಏನು ಬಿಡಲೆಂದು ಆಕರಿಸ ತೊಡಗಿದನು ಹಾಳಾದ ಕನಸುಗಳು ಒಳಗಿನ ಮನಸನು ಹಿಡಿದ ಕ್ಷ-ಕಿರಣ ಚಿತ್ರಗಳು. ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ ಬಯ...

ಈ ಮೈಯೆ ಒಮ್ಮೆ ಇಡಿ ವಿಶ್ವವೆಂದು ನನಗೇಕೊ ತೋರುತಿತ್ತು. ಈಗ ಜೀವದೀ ಹೊಟ್ಟೆ ಪೂರ್ತಿ ಎನಿಸುವದು ಎರಡೆ ತುತ್ತು. ಜಗದ್ವ್ಯಾಡ ಸಂಚಲನಕೀಗ ಇದು ಸಣ್ಣದೊಂದು ಸಂಚಿ ಬೃಹದ್ಭೂಮಿಯಲಿ ಬೃಹತ್ತರದ ಆದರ್ಶಕೆಂದು ಹಂಚಿ ಒಪ್ಪಿಡಿಯ ಕವಳ ಏತಕ್ಕೆ ಸಾಕು ಅದು ಮಹಾ...

ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ. ಉರುಳುವುದು ಹೆಣಗಳ ಸಾಲು ಸಾಲ...

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ ಕಜ್ಜಳವ ಕಳೆದೊ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...