
ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! ಸೋತವರು ಅವನೇಳಿದಂತೆಯೇ ಕೇಳಬೇಕಂತಮ್ಮಮ್ಮ| ಮಾತಿನಲ್ಲೇ ಮನ...
ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ? ಸದ್ಯ ನಿಮ್ಮ ಭೂಮಿ ಬೇಡ ಬಂಗಲೆ ಬೇಡ ಮೊದಲು ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಮರ್‍ಯಾದೆ ...
ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟ...
ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ ಮರವೆ ...
ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಹಿಂದಿನದೆಲ್ಲಾ ಓಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ ಹೀಗೂ ಸೆಟ್ಟಾಗುವವ...
ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ ವಶವಾಗಿ ರೋಷಕ್ಕೆ ಈಡಾಗಿ ಎ...
‘ಈ ಕಾರು ಯಾರದ್ದು?’ ಕೇಳಿದ ತಿಮ್ಮ ಯಜಮಾನ್ರನ್ನ ಮಗ ಒಯ್ದಾಗ ಅದು ಮಗಂದು ಮಗಳು ಒಯ್ದಾಗ ಅದು ಮಗಳದ್ದು ಅರ್ಧಾಂಗಿ ಕ್ಲಬ್ಬಿಗೆ ಒಯ್ದಾಗ ಅದು ಅರ್ಧಾಂಗೀದು ಎಂದ ಯಾವಾಗ ನಿಮ್ದಾಗುತ್ತೆ ಯಜಮಾನ್ರೇ? ಪುನಃ ಕೇಳಿದ ತಿಮ್ಮ ಅದನ್ನು ಗ್ಯಾರೇಜಿಗೆ ಒಯ್ದಾಗ...
ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ – ಬಾಳ ಕೊನೆಯ ಸಂಪುಟದ ಒಂದು ಹಾಳೆಯ...













