ಬಂಧನಗಳ ಕಳಚಿ
ಬಂಧಮುಕ್ತಳಾಗಬೇಕೆಂದರೂ
ಅದು ನಿನ್ನಿಂದಾಗದು.
ನೀನು ಮಮತೆಯ ಕವಚದೊಳಗೆ
ಸದಾ ಬ೦ಧಿ.
ತೊಡರುತ್ತವೆ ನಿನ್ನ ಕಾಲಿಗೆ
ಪ್ರೀತಿಯ ಸಂಕೋಲೆಗಳು,
ಬಿಡಿಸಿ ಕೊಳ್ಳಲಾಗದ ಬಂಧನಗಳು,
ನಿನಗಲ್ಲೇ ತೃಪ್ತಿ, ನಿನಗಲ್ಲೇ ಮುಕ್ತಿ,
ಅದೇ ನಿನ್ನ ಶಕ್ತಿ!
ಬೇಡಿ ಕಳಚುವ ಹೋರಾಟಗಳೆಲ್ಲಾ
ಬರೆ ಬೂಟಾಟಿಕೆ,
ತೋರಿಕೆಯ ಮುಖವಾಡ.
ಹೋರಾಡುವವರೂ ಮನೆಗೆ ಹೋದರೆ
ತಾಯಿ, ಹೆಂಡತಿ, ಅತ್ತೆ, ಸೊಸೆಯರೇ;
ಈ ಕರ್ತವ್ಯಗಳಿಂದ ಬಿಡುಗಡೆಯಿಲ್ಲ.
ಹೋರಾಟದ ಮುಖವಾಡ ಹಾಕಿ
ಕರ್ತವ್ಯ ಬಿಟ್ಟು ಓಡುವವರಿಗಿಂತ
ದೊಡ್ಡ ಅತೃಪ್ತರಿಲ್ಲ.
ಅವರವರ ಮನೆಯಲ್ಲಿ
ಅವರವರು ಗೆದ್ದ ಮೇಲಲ್ಲವೇ
ಇತರರಿಗಾಗಿ ಹೋರಾಡುವ
ಶಕ್ತಿ ಪಡೆಯುವುದು?
*****