ಅವರು ಕಾಲುಗಳು ಸೋಲುವ ತನಕ
ಬೆಂಬತ್ತಿ ಹೋದರು.

ಕೈಗಳು ಸೋಲುವ ತನಕ
ಗುಂಡು ಹಾರಿಸಿದರು.

ಕಣ್ಣುಗಳು ಸೋಲುವ ತನಕ
ಕಿಡಿಗಳ ಕಾರಿದರು.

ನಾಲಗೆ ಸೋಲುವ ತನಕ
ನಿಂದೆಯ ಸುರಿಮಳೆಗೈದರು.

ಹೃದಯ ತುಂಬಿ ಬಂದ ದಿನ
ಮಮ್ಮಲ ಮರುಗಿದರು
ಗೆದ್ದರು…
*****
ಗುಜರಾತ್‌ಗೆ ಕವಿ ಸ್ಪಂದನ