Home / ಕವನ / ಕವಿತೆ

ಕವಿತೆ

ನಸುಕಿನಲ್ಲಿ ಹಲ್ಲು ಮೂಡದ ಹಸುಳೆಯನ್ನು ಅವರು ಹೊಸಕಿ ಹಾಕಿದರು ಹಾಡು ಹಗಲೇ ಹರೆಯದ ಹುಡುಗಿಯನ್ನು ಎಳೆದಾಡಿದರು ಮುಸ್ಸಂಜೆಯಲ್ಲಿ ಮನೆಗೆ ಮರಳುತ್ತಿದ್ದ ಮುದುಕನನ್ನು ಮುಗಿಸಿದರು. ಬಲಿಯಾದವರು-ಬಲಿಗೈದವರು ಇಬ್ಬರೂ ನನ್ನ ಒಡಹುಟ್ಟುಗಳು ಅಯ್ಯೋ, ದ್ವೇ...

ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ ಹೆಸರು ಸದಾ ಹಚ್ಚ ಹಸಿರು ನಿನ್ನಾ ಕಾವ...

ಕಣ್ಣಲ್ಲಿ ನೀರು ತುಂಬಿ ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು ನಗುನಗುತ್ತಾ ಅಳುತ್ತೇವೆ. ಅಳು ಮುಚ್ಚಿ ನೋವು ಮರೆಸಿ ನಗುನಗುತ್ತಾ ಬೆರೆಯುತ್ತೇವೆ. ಹೊರಜಗತ್ತಿಗೆ ಸದಾ ಸುಖಿಗಳು ನಾವು ನಗುನಗುತ್ತಲೇ ಇರುವ ಅದೃಷ್ಟಶಾಲಿಗಳು! ಗೃಹಲಕ್ಷ್ಮಿಗಳು. ದೂರ...

ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ ಚಿತ್ತವಳಿಪನು ನನಗೆ ತಳೆಯದಿರಲಿ ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ ದೃಷ್ಟಿ ತಾಕಿದರಾನು ಬಾಡಿಯೇನು ಮುಟ್ಟಲೇತಕೆ ಮುಂ...

ನಡೆವುದೆಂದರೆ ಹೀಗೆ…. ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ ಗಿರಗಿರನೆ ಗುಂಡಗೆ ಬುಗುರಿಹುಳದ ಇಡೀ ದೇಹವೇ ವೃತ್ತಾಕಾರ ತಿರುಗುತ್ತಾ ಗಾಳಿಯಿಲ್ಲದೆಯೂ ಗಿರಗಟ್ಟೆ. ತಿರುಗುತ್ತಲೇ ಒಂದಿಷ್ಟು ಮುಂದೆ ಯಾರಿಗೆ ಗೊತ್ತು? ಹಿಂದಕ್ಕೂ ಆಗಿರಬಹುದು ಆ ನಡಿ...

ಗಗನದಂಗಳ ಹಾರು ಹಕ್ಕಿಯೆ ಯಾವ ಜಾತಿಯು ನಿನ್ನದು ಶಾಂತ ಶೀತಲ ಮಧುರ ಗಾಳಿಯೆ ಯಾವ ದೇಶಾ ನಿನ್ನದು ಮನುಜ ಮನುಜನ ಜಡಿದು ಒಡೆದನು ಮನುಜ ದನುಜಾ ಅದನೆ ಆತ್ಮ ಧರ್ಮಾ ವಿಶ್ವ ಧರ್ಮಾ ಮರೆತು ಮಣ್ಣನು ತಿಂದನೆ ನನ್ನ ದೇವರು ಅವನ ದೇವರು ಇವನ ದೇವರು ಭಿನ್ನವೇ...

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು ಕ...

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣ...

ಮಳೆ ಸುರಿದು ಎಲೆಗಳಿಂದ ಹನಿಹನಿ ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು. ಹೂವರಳಿ ಸುವಾಸನೆಯ ಗಾಳಿ ಬೀಸು. ದೇವರ ಮನೆಯಲ್ಲಿ ನಂದಾದೀಪದ ಬೆಳಕು. ಹನಿಯುವ ಆಳ ನಿರಾಳದ ಸಿಂಚನಕೆ ಅವನ ಮೃದು ಸ್ಪರ್ಶ ಸೋಕಿ ಒದ...

ನಮ್ಮ ಭಾರತವೆನ್ನಿರಿ | ವಿಶ್ವ ಚೇತನವೆನ್ನಿರಿ || ವಿಶ್ವ ಮಾತೆಗೆ ಉತ್ಸವವಿದು | ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ|| ವಿಶ್ವೇಶ್ವರರ ನಿರ್ಮಾಣ | ಬೃಂದಾವನ ಅಮರಗಾನ | ಜವಾಹರ ಗಾಂಧೀಜಿ ತ್ಯಾಗ ಬಲಿದಾನ | ಇತಿಹಾಸ ಉತ್ತುಂಗದ ಮಾನ ಸನ್ಮಾನ ||ನಮ್ಮ||...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...