ಉದ್ಯೋಗರಹಿತ ಸಾಫ್ಟ್‌ವೇರ್
ವೀರ ವೀರಾಗ್ರಣಿಯರಿಗೆ
ಆಯಿತು ಮುಖಭಂಗ

ಲಕ್ಷೋಪಲಕ್ಷ ಅಲಕ್ಷ್ಯದಿಂದಲಿ
ಕೂತು ಕಾಯುತಿಹರು ಬೆಂಚಿನಲಿ
ಜಾತಕ ಪಕ್ಷಿಯಂತೆ ನಗರದಲಿ

ಅತಿಯಾಸೆ ಬಿಸಿಲ ಬೇಗೆಯಲಿ
ಬಾಯಾರಿಕೆಯ ತೃಷೆ ನೀಗಿಸಲು
ಕಾಣಬಹುದೇ ಓಯಸಿಸ್ಸು
ಈ ಮರುಭೂಮಿಯಲಿ

ಹೊಸತನಕೆ ಕೈ ಚಾಚಿ ಇಟ್ಟರು
ತಿಲಾಂಜಲಿ ಕಳ್ಳು-ಬಳ್ಳಿ ಬಂಧು ಬಳಗಕೆ
ಹೊರಟಿತ್ತು ಪಬ್ ಚೈತ್ರಯಾತ್ರೆಗೆ
ಆಕರ್ಷಿಸುವವು ಸೂಜಿಗಲ್ಲಿನಂತೆ
ದೀಪದ ಹುಳು ರೆಕ್ಕೆ ಸುಟ್ಟುಕೊಳ್ಳುವಂತೆ

ಹೊಂದಾಣಿಕೆ ಸಂಬಂಧದಲಿ
ಭ್ರೂಣಗಳು ಬೀದಿ ಬದಿಯ ತೊಟ್ಟಿಯಲಿ
ಜವಾಬ್ದಾರಿಯಿಲ್ಲದ ಅನಿಷ್ಟತೆ-
ಕಂಪ್ಯೂಟರ್‍ಸ್ ಬಾಗಿನ

ಸಂಸ್ಕೃತಿಯ ತೊರೆದರೆ
ಬಣ್ಣ ಬಣ್ಣದ ಕನಸುಗಳೆಲ್ಲಾ ಚೆಲ್ಲಾಪಿಲ್ಲಿ
ಸಂಬಂಧಗಳ ಒಡೆದ ಕನ್ನಡಿಯಲಿ
ಮಾನವನ ಛಿದ್ರ ವಿಚ್ಛಿದ್ರ ಬಿಂಬಗಳು.
*****
೨೩-೩-೨೦೧೦ರ ಶಿವಮೊಗ್ಗದ ಸೃಷ್ಠಿ ರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ