ಬರೆದೂ ಬರೆದೂ ಸಾಕಾಯಿ
ತಪ್ಪ ಈ ಪದ್ಯ ಇವುಗಳದು
ಮುಗಿಯದ ತಂಟೆ ಒಂದಷ್ಟು
ಹೊತ್ತು ಒಂದೊಂದು ರೂಪು,
ಇವುಗಳ ಕೈಯೋ ಕಾಲೋ ಮುಖವೋ
ಯಾವುದೂ ತಿಳಿಯುವುದು ಕಷ್ಟ
ಆದರೂ ಇರಲಿ ಒಂದು ಅಂಗಿ
ಪಾಪ ಬೆತ್ತಲೆ ನಿಂತಿದೆ ಸಡಿಲವೋ
ಬಿಗಿಯೋ ಒಂದು ಅಂಗಿಯಿರಲಿ
ಪಾಪ ಅದಕ್ಕೂ ಬಿಡುಗಡೆಯಾಗಲಿ
*****
ಬರೆದೂ ಬರೆದೂ ಸಾಕಾಯಿ
ತಪ್ಪ ಈ ಪದ್ಯ ಇವುಗಳದು
ಮುಗಿಯದ ತಂಟೆ ಒಂದಷ್ಟು
ಹೊತ್ತು ಒಂದೊಂದು ರೂಪು,
ಇವುಗಳ ಕೈಯೋ ಕಾಲೋ ಮುಖವೋ
ಯಾವುದೂ ತಿಳಿಯುವುದು ಕಷ್ಟ
ಆದರೂ ಇರಲಿ ಒಂದು ಅಂಗಿ
ಪಾಪ ಬೆತ್ತಲೆ ನಿಂತಿದೆ ಸಡಿಲವೋ
ಬಿಗಿಯೋ ಒಂದು ಅಂಗಿಯಿರಲಿ
ಪಾಪ ಅದಕ್ಕೂ ಬಿಡುಗಡೆಯಾಗಲಿ
*****