
ಕಾಲವೆಂದಿಗೂ ಕಾಯುವುದಿಲ್ಲ ಕಾರ್ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು ಈಗಿನ ಘಳಿಗೆಯೇ ಶುಭಘಳಿಗೆಯು| ಯಾವ ದಿನವೂ ...
ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ ಅಲ್ಲ ಗೆಳೆಯ- ಅಧಿಕಾರ ಕ...
ಕೆಂಡ ಕಾರುತ ಸೂರ್ಯ ಹುಟ್ಟಿ ಬರುವುದನ್ನೆ ತವಕದಿಂದ ನೋಡುತ್ತಿದ್ದೆ. ಸೂರ್ಯಕಾಂತೆಯರ ದಂಡು ನಿಗಿನಿಗಿ ಕೆಂಡ ಸೂರ್ಯನ ಬಿಗಿದಪ್ಪಲು ಕಾದಿರುವ, ತಪ್ತ ಕಾಂತೆಯರು- ಆಕಾಶ ನೋಡುತ್ತಿರಲು ಭೂಮಂಡಲಕೆ ಹನಿಹನಿಯಾಗಿ ತೊಟ್ಟಿಕ್ಕುವ ಕೆಂಡದ ಮಳೆ ರಕ್ತದ ಹೊಳೆ...
ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ ಕಡಲೊಳಗೆ ನೀನೆ ಕಾನನದೊಳಗೆ ನೀನೆ ಓ ಅನಾದಿಯವನೆ ನದಿಯೊಳಗೆ ನೀನೆ ನಭದೊಳಗೆ ನೀನೆ ಅಂತರಂಗದೊಳು ನೀನೆ ಬಹಿರಂಗದೊಳು ನೀನೆ ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ ಅನ್ಯದೊಳ ನೀನೆ ಅನನ್ಯದೊಳ ನೀನೆ ತಮದೊಳಗೆ ನೀನೆ ...













