ನೆಹರು ನಿಮ್ಮ ನೆನಪು

ನೆಹರು ನಿಮ್ಮ ನೆನಪು
ನಮ್ಮೆಲ್ಲರ ಅಂತರಂಗವ ತುಂಬಿ
ಬರಡಾಗಿದ್ದ ನೆಲವು ಹಸಿರಾಯ್ತು
ನಿಮ್ಮ ನೆನಪು ಹೊನಲ ಚುಂಬಿ ||

ವರುಷವು ಉರುಳಿ ಬರಲು
ನಿಮ್ಮ ನೆನಪು ಭಾವನೆ ಚೆಲುವ
ಕವಲೊಡೆದ ಸಸಿಯು ಚಿಗುರಿ
ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ ||

ಪಂಚಶೀಲ ದಿವ್ಯತತ್ವ
ಬೆಳಗಿ ಭವ್ಯಜೀವನ ಕಾವ್ಯ
ನಿಮ್ಮ ನೆನಹು ನಿಲುವು ನಿಲ್ಲುವಲ್ಲಿ
ಧ್ಯಾನ ಚಿಂತನ ಸಾರ್ಥಕತೆಯಲ್ಲಿ ||

ನಿಮ್ಮ ಕೀರ್ತಿ ಉಜ್ವಲವಾಗಿ
ನಿರ್‍ಮಲತೆಯ ಕಂಡಿತು ಧರಿತ್ರಿ
ಸ್ಫೂರ್ತಿಗಿದೋ ನಿಮ್ಮಯ ಮೂರ್‍ತಿ
ಭಾರತದ ಏಳ್ಗೆಗಾಗಿ ದುಡಿಯುವಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಿ
Next post ದೀರ್ಘ ಪ್ರಾರ್ಥನೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…