ಬ್ರಹ್ಮಮಾನಸ ಸರೋವರದಲಿ
ನಾವು ತೇಲುವ ಚಲುವರು
ವಿಮಲ ಮಾನಸ ಕಮಲ ವನದಲಿ
ನಾವು ನವಯುಗ ರಾಜರು
ಉಸಿರು ಉಸಿರಲಿ ಶಿವನ ಹೆಸರನು
ಬರೆದ ಶಿವಾಚಾರ್ಯರು
ಲಕುಮಿ ನಾರಾಯಣರು ನಾವೇ
ದೇವ ಯುಗದಾ ಪೂಜ್ಯರು
ನಾವು ಜ್ಯೋತಿರ್‍ಬಿಂದು ರಥಿಕರು
ಜ್ಯೋತಿ ಸಾಗರ ಪಥಿಕರು
ಜ್ಞಾನ ಸಾಗರ ಸುಖದ ಸಾಗರ
ಶಾಂತ ಸಾಗರ ಸುಖಿಗಳು
ನಮ್ಮ ಮಡಿ ಹುಡಿ ಶಿವನ ನಡೆಮಡಿ
ನಾವು ಬೆಳಕಿನ ರೂಪರು
ಮಾತು ಶಿವಮಯ ನೋಟ ಶಿವಮಯ
ನಾವು ಗಾಯನ ಯೋಗ್ಯರು
*****


















