
ಮೋಡಗಳೇ ಎತ್ತ ಹೋದರೆಲ್ಲಿ? ಬನ್ನಿ ಈ ನಾಡ ಪ್ರವೇಶ ಮಾಡಿ ನೀರ ಹನಿಗಳ ಚೆಲ್ಲಿ ಹಾತೊರೆಯುತಿಹವು ಮೊಳಕೆಯೊಡೆಯಲು ಕಾಳು ಕಮರುವ ಮೊದಲಲ್ಲಿ ಮೋಡಗಳೇ ಬನ್ನಿರಿಲ್ಲಿ ನೀರ ಹನಿಗಳ ಚೆಲ್ಲಿ ನಮ್ಮೂರ ಹಾದು ಹೋಗುವ ಮುನ್ನ ಎಮ್ಮ ಜೀವಕೆ ಕಳೆಯ ತನ್ನಿ ಸಾವಿರಾರ...
ಮೌನವಾಗಿದೆ ಧರಿತ್ರಿ ಮೌನವಾಗಿದೆ ದಿಗಂತ ಮೌನವಾಗಿದೆ ಸಾಗರ; ಒಂದಾಗಿದೆ ಭೂಮಂಡಲವಾಗಿ. ಜತೆಯಾಗಿದೆ ಮೌನದಲಿ ಅಖಂಡವಾದ ನಂಟಿನಲಿ ನಿರಂತರತ್ವದ ಸಂಕೇತದಲಿ ಅವಿಚ್ಛಿನ್ನತೆಯ ಭಾವದಲಿ. ನೆಲವ ಬಿಟ್ಟು ಜಲವಿಲ್ಲ ಜಲವಬಿಟ್ಟು ಗಗನವಿಲ್ಲ ಒಂದಕ್ಕೊಂದು ಜತೆಯ...
“ಕಂದ, ಕೇಳುತ್ತಮದ ರಾಜ್ಯ ಒಂದಿಹುದು: ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;” ಎಂದು ನೀನಾಡುವಾ ರಾಜ್ಯವೆಲ್ಲಿಹುದು? ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ! “ಕಿತ್ತಳೆಯ ಮರಗಳಲಿ ಹೂಗಳರಳುತ್ತ ಎತ್ತಲೂ ಮಿಂಚುಹುಳು ಚಿಮ್ಮಿ ಕ...
ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು ಜ್ಯೋತಿರ್ಬಿಂದು ರಥಿಕರು ಜ್ಯೋತಿ ಸಾಗರ ಪಥಿಕರು...
ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...
ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...
ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...













