ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂ...

ಬೆರಳಲಿ ಬೆರಳ ಹೊಸೆದು ನಡೆವ ದಾರಿ ಅದು ಟೈಂಪಾಸ್ ಲವ್ವು, ಬೆಂಚಿನ ಅಂಚಿನಲಿ ಕುಳಿತು ಆಡಿದೆರಡು ಮಾತು ಅದು ಬೈಪಾಸ್ ಲವ್ವು, ನಾಲ್ಕಿಉ ರಸ್ತೆಯಲಿ ಸೇರಿ ಸಿಕ್ಕಿಕೊಂಡರೆ ಅದು ಟ್ರಾಫಿಕ್‌ಜಾಮ್ ಲವ್ವು! *****...

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ ಅಸತ್ಯದ ಕುಲುಮೆಯೊಳಗೆ ಸುತ್ತಿಗೆ ಹಿಡಿದು ಮತ್ತೊಮ್ಮೆ ಬರಬಾರದೇ ನೀನು ‘ಕಮ್ಮಾರನಾಗಿ’ ಜಾತಿ ಮತ ಕುಲ ಧರ್ಮಗಳ ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ ಪಕ್ಷಗಳು...

ನಿಮಗೀಗ ಬುಲ್‌ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೆ? ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ ಆರಿಸಿದಿರಿ.  ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ. ತುಸು ತಾಳಿರಿ.  ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ. ಎಡಗಡೆಯಿಂದ ಸಾಲುಗಟ್...

ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ. ಕತ್ತಲೆಯೊಳು ಮುಳುಗಿ, ಕಾಮನ ಬಲೆಯೊಳು ಸಿಲ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ. ನಿಮ್ಮ ಇರವು ಎಂತೆಂದರೆ, ಕಾಯವೆಂದರೆ ಕಳವಳಕ್ಕೊಳಗಾಯಿತ್ತು. ಜೀವವೆಂದರೆ ಅರುಹು ಮರವೆಯೊಳಗಾಯಿತ್ತು. ಮನವೆಂದರೆ ಸಚರಾಚರವ...

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ || ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ ...

ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು ಸಂತೆಯೊಳಗಿಳಿದಿದ್ದೇವೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಲೇ ಬ...

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....