ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ
ವಸ್ತುಗಳಾಗಿದ್ದವು.

ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ
ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು
ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು.
ನಮಗೆ ಬರೇ ಕನ್ನಡಿ ಸಾಕು-ಅದನ್ನು ಹಿಡಿಯುವುದಕ್ಕೆ ಮಾತ್ರ ಫ್ರೇಮು.

ಹಾಗೆಯೇ ದೇವರು.  ದೇವರಿಗೊಂದು ದೇವಾಲಯ.
ದೇವಾಲಯಕ್ಕೆ ಗೋಪುರ, ಪ್ರತಿಮೆಗಳು, ಕಾಲಿಗೆ ಗೆಜ್ಜೆ,
ಗೆಜ್ಜೆಗೆ ಮಣಿಗಂಟೆ-ಸದ್ದುಮಾಡುವುದಕ್ಕಲ್ಲ.
ನಮಗೊ ದೇವರು ಬೇಕು-ಅದಕ್ಕೆಂದು ದೇವಾಲಯ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)