‘ಪ್ರೀತಿ’
ಅದೇನು? ಎಂದು
ಯಾಕೆ ಕೇಳುತ್ತೀರಿ?
ಕಡಲನ್ನು ನೋಡಿದ್ದೀರಾ?
ಹಾಗಾದರೆ ಸುಮ್ಮನಿರಿ.

‘ಪ್ರೀತಿ’
ಪರಿಚಯಿಸಿ ಅಂದಿರಾ?
ತುಂಬಾ ಸುಲಭ.
ಒಮ್ಮೆ ಆಗಸವನ್ನು
ಕಣ್ಮುಂದೆ ಕರೆಯಿರಿ.

‘ಪ್ರೀತಿ’
ಪ್ರಿಯವಾಗುತ್ತದೆ.
ಯಾಕೆಂದರೆ ಅದಕ್ಕೆ
ಬಣ್ಣವಿದೆ, ರುಚಿಯಿದೆ,
ವಾಸನೆಯಿದೆ.

‘ಪ್ರೀತಿ’
ಶೂನ್ಯಕ್ಕೆ ಸಮ.
ಯಾಕೆಂದರೆ ಅದು
ಎಲ್ಲವೂ ಹೌದು
ಏನೇನೂ ಅಲ್ಲ!

‘ಪ್ರೀತಿ’
ಪ್ರಕೃತಿ. ಅದು ಹೂವಾಗುತ್ತದೆ,
ಕಾಯಾಗುತ್ತದೆ, ಹಣ್ಣಾಗುತ್ತದೆ,
ಮತ್ತೆ ಬೀಜವಾಗುತ್ತದೆ.