ಬೆರಳಲಿ ಬೆರಳ
ಹೊಸೆದು
ನಡೆವ ದಾರಿ
ಅದು ಟೈಂಪಾಸ್ ಲವ್ವು,
ಬೆಂಚಿನ ಅಂಚಿನಲಿ
ಕುಳಿತು
ಆಡಿದೆರಡು ಮಾತು
ಅದು ಬೈಪಾಸ್ ಲವ್ವು,
ನಾಲ್ಕಿಉ ರಸ್ತೆಯಲಿ ಸೇರಿ
ಸಿಕ್ಕಿಕೊಂಡರೆ
ಅದು ಟ್ರಾಫಿಕ್‌ಜಾಮ್ ಲವ್ವು!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)