ನಗುವಿರಲಿ ಅಳುತಿರಲಿ ಎರಡನ್ನು ನಂಬೆ. ನಗೆ ನಂಜು ಅಳು ಮಂಜು ಇದೀತು ಎಂಬೆ. ಮಾತಿರಲಿ ಇರದಿರಲಿ ಎರಡು ಸಮ ತಾನು. ಇದು ಮರುಳು ಅದು ಹುರುಳು ಇರಲಾರದೇನು? ಹೊರಗೊಂದು ಒಳಗೊಂದು ಲಕ್ಷಣವು ಸಾಕು. ಹಾಗೇನು? ಹೀಗೇನು? ಲಕ್ಷ್ಯವೇ ಬೇಕು. *****...

ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ? ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ? ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ? ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ? ಮೇಳದೊಳಷ್ಟಿಷ್ಟು ಕರಿದ ಹಲಸಿನ ಘಮಲೆದ್ದರದು ಸಾ...

ಶೆಟ್ಟೀ ಬೆಟ್ಟದ ಮೇನೇ ಹುಟ್ಟಿದೊಂದು ಬಿದುರಾ ಕೋಲೇ ಕೋಲೆಂಬೂ ಗೀಜಗನೇ || ೧ || ಹುಟ್ಟಿತೊಂದು ಬಿದ್ರ ಕೋಲು ಜಾಡಕಾರ ಕತ್ಯೋ ಜಾಡಕಾರ ಕತ್ತಿಗೇ ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ || ಆಗಿತ್ತೊಂದು ಗೂಡ್ ಮೊರಕೇ ಖಂಡ್ಗ ಖಂಡ್ಗ ಬತ್ತ ಚಿನ್ಮಾಯಂತ...

ಗುರುಗಳೆ ನೀವು ನಡೆದ ಹೆಜ್ಜೆ ಗುರುತು ನನ್ನೆದೆಯಲ್ಲಿ ಅಚ್ಚೊತ್ತಿವೆ ಎಲ್ಲವೂ ಮರ್‍ತು ನಿರ್‍ಮಲ ಪ್ರೇಮ ನಿಮ್ಮದು ಜನ ಮನದಲಿ ನೀವು ಬಿತ್ತಿದ ಜ್ಞಾನವು ನಿತ್ಯ ಜಿವ್ಹೆಯಲಿ ನೀವು ಅಲೆದಾಡಿದ ಧಾಮ ಆನಂದ ಪರಾಕಾಷ್ಠೆ ನೀವು ಹಾಡಿದ ಹಾಡು ನೀತಿ ನಿಷ್ಠೆ ...

ಜಾಜಿ ಮಲ್ಲಿಗೆ ಸೂಜಿ ಮಲ್ಲಿಗೆ ನನ್ನ ಅತ್ತಿಗೆಯಿರುತಿದ್ದರೆ ಮಾಲೆ ಕಟ್ಟಿ ನಿಮ್ಮ ಮುಡಿಗೇರಿಸುತಿದ್ದಳು ನೀವಿಂತು ಬಾಡಲು ಬಿಡದೆ ಗಂಗೆ ಗೌರಿ ಕಪಿಲೆ ನನ್ನ ಅತ್ತಿಗೆಯಿರುತಿದ್ದರೆ ಹುಲ್ಲು ನೀರಿತ್ತು ನಿಮ್ಮ ಹಸಿವಿಂಗಿಸುತಿದ್ದಳು ನೀವಿಂತು ಕೂಗಲು ಬ...

ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ತಲೆಬಾಗಿ ನಾ ತೆರೆದ ಮಲೆದೇಗುಲದ ಬಾಗಿಲಿದಿರು ನಿಂತ ತೆರವಾಗುತಿದೆ ನನ್ನ ಕಂಗಳಿಗಾಗೆ ಅರೆ ಬಾನು ಮರ ಹಕ್ಕಿ ಹೊಳ್ಳ ಹೂ ಹೊದರು ಅಂತರಂಗದ ದೈವ ಮೂಲೆತಿರುಗಿನೊಳವಿತು ಸನ್ನೆಗೈದಂತೆಯೇ ಮೈಗರೆವ ಪರಿಗೆ ಒಂದು ನಗೆ ಒಂದು...

ಹೌದು; ನಾನು ಬಡವಿ ಝಗ ಝಗಿಸುವ ಉಡುಗೆ ತೊಟ್ಟರೂ ನಿಮ್ಮ ಪಟ್ಟಣಗಳು ಬತ್ತಲೆಯಾಗಿವೆ ನೋಡಿ. ಹೂಮನಸಿನ ನನಗೆ ಹರಿದ ಸೀರೆಯೇ ಗತಿ ಎದೆ ಸೀಳಿ ಹೆಕ್ಕಿದರೂ ಅಕ್ಷರಗಳ ಸುಳಿವಿಲ್ಲ ಖುರಾನು ಪವಿತ್ರ ಕಣ್ಣಿಗೊತ್ತಿಕೊಳ್ಳುವೆ ಮುಟ್ಟದಿರಿ ಮೈಲಿಗೆಯಾದೀತು ತೆಗ...

ಏನೇ ಇರಲಿ ಏನೇ ಬರಲಿ ಕನ್ನಡ ನನ್ನುಸಿರಾಗಿರಲಿ ವಿಶ್ವದ ಯಾವುದೆ ನೆಲದಲ್ಲಿರಲಿ ಎದೆಯಲಿ ಕನ್ನಡ ಬೆಳಗಿರಲಿ ಕಣ್‌ಕುರುಡಾಗಲಿ ಬೆಳಕಿರುಳಾಗಲಿ ಕನ್ನಡ ಕಣ್ಣಲಿ ತುಂಬಿರುವ ಕಂಬನಿ ಸುರಿಯಲಿ ರಕುತವೆ ಹರಿಯಲಿ ಹೃದಯವು ಕನ್ನಡ ಎನುತಿರಲಿ ಬುವಿಯೇ ನಡುಗಲಿ ...

ಭವ್ಯ ಭಾರತೀಯ ತನುಜಾತೆ ಮಣಿರತ್ನ ಪುತ್ಥಳಿ ನೀ ಗುಣಮಾನ ಸಜ್ಜನೈಕ ಚೂಡಾಮಣಿಯಾಗಿ ನಿಂದವಳು ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ ತ್ಯಾಗ ಭಾವ ಚಿತ್ತಗಂಗೆ ಎನಿಸಿ ಕಲ್ಪಲತೆ ವೀರ ಮಾತೆ ತಪೋವಿರಾಜಿತೆ ಜಿನಧರ್ಮಪರಾಯಕೆ ಉದಾರ ಚುತುರ್ವಿಧ ದಾನ ಗೌರವ ಸಂಜಾತ...

1...6768697071...885

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...