ಕಾರಾಗೃಹದಲ್ಲಿದ್ದಂತೆಯೇ ಪಾಪ ಅವು ಕಟ್ಟಿಹಾಕಿದ್ದಾನೆ ದೇವರು ನೆಲದೆದೆಯ ಬೆಟ್ಟ ಪರ್ವತಗಳು ಚಲಿಸದಂತೆ, ಯಾರೂ ಸುಳಿಯದಂತೆ ಸುಡಲು ಬಿಟ್ಟಿರುವನೆ ಮರಳ ಪಾಪ ಪ್ರಾಯಶ್ಚಿತಕ್ಕೊಳಪಡುವಂತೆ, ಉಪ್ಪು ಬೆರಿಸಿರುವನು ಸಮುದ್ರಕೆ ಹೊಳೆಹಳ್ಳ ಕೆರೆ ನೋಡಿ ನಗುವ...

ನನ್ನೆದೆಯ ಬಾಂದಳದ ಅರಿವಿನಾ ಜ್ಯೋತಿಯೇ ನೀ ಬೆಳಗು, ನಿನ್ನ ಬೆಳಕಿರಲೆನ್ನ ಒಳಗು-ಹೊರಗು, ದಿಕ್ ದಿಗಂತದ ಕಾಂತಿ ಎನ್ನ ಚೇತೋಹಾರಿ, ಬಾನ್ ಕಿರಣವಿಣುಕದಾ ಚಿತ್ತ ತಮೋಹಾರಿ, ಇರುಳಿರುಳ ಮರಳಿನೊಳು ಕುರುಡು-ಹುರುಡಾಗದಿರಲಿ, ಹಗಲಗಲ ಸಿರಿಧನದೊಳು ಬರಡು-ಬ...

ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ...

ನಿನ್ನದು ಆ ತೀರ – ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ. ಮೌನದ...

ದೇಶದ ಜನತೆಗೆ ಸೌಭಾಗ್ಯವ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸರ್ವವೂ ಸಹಿಸಿಕೊಳುವ ತಾಳ್ಮೆಯ ಶಕ್ತಿಯ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕವಿ ಧರ್ಮೇಂದ್ರ ಪೂಜಾರಿಗೆ ಸತ್ಯನುಡಿಗೆ ಧೈರ್ಯಕೊಟ್ಟು ಜೀವನಕ್ಕೆ ಮೋಕ್ಷ ನೀಡಲು ಆರು...

ಹೊಲೆ ಮನೆ ಹೊಲೆಯಾಗುವ ಮನೆ ಸತ್ತವರ ಮನೆ ಸಾವಿನ ಮನೆ ನನಗೆ ಡಿಕಾಕ್ಷನ್ ಮಾತ್ರ ಸಾಕು ಎಂದರು ಇವರು ಏನೊ ತಲೆನೋವು ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು ಎಳೆಯುತ್ತಿದೆ ನರ ಸುಮ್ಮನೇ ಇರುವುದು ಇಲ್ಲಿ ಸುಮ್ಮನಿರುವುದೆ ನಮ್ಮ ಕೆಲಸ ಮತ್ತು ನಿರ...

ಕೇಶವೇ ವಸ್ತ್ರವೆಂದು ಅದನ್ನೆ ಮೈ ತುಂಬಾ ಹೊದ್ದು ಉಟ್ಟಿದ್ದೆಲ್ಲವ ಬಿಸುಟು ಹೊರಟೇಬಿಟ್ಟೆಯಲ್ಲೆ ಅಕ್ಕ ಮರೆಯಲು ಮನದಾಳದ ದುಃಖ ನಿನಗಾಗಿ ಅಲ್ಲಿದ್ದ ಚೆನ್ನ ಹುಡುಕಿ ಹೊರಟೆ ಅವನನ್ನೆ ಲೋಕದಿದಿರು ನೀ ಆದೆ ಭಿನ್ನೆ ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ...

ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....