ಹೊಸ ಆಸೆಗೆ ಕಾರಣವೇ ಹೊಸ ಕಾಲದ ತೋರಣವೇ ಶುಭನಾಂದಿಗೆ ಪ್ರೇರಣವೇ ಹೊಸ ವರ್ಷವೆ ಬಾ, ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ. ಮಣ್ಣ ಸೀಳಿ ಏಳುವಂತೆ ಥಣ್ಣಗಿರುವ ಚಿಲುಮೆ, ಹಣ್ಣ ತುಂಬಿ ನಿಲ್ಲುವಂತೆ ರಸರೂಪದ ಒಲುಮೆ, ಹುಣ್ಣಿಮೆಯ ಶಾಂತಿಯನ್ನೆ ಹೃದಯದ...

ತಂಗಾಳಿ ಸೂಸಿ ಹಾಡಿದ ಜೋಗುಳ ನಿಶ್ಶಬ್ದ ರಾತ್ರಿಯಲಿ ಜುಳು ಜುಳು ನದಿಯೊಡಲ ತುಂಬ ಅವನ ಧ್ಯಾನ ಬಾನ ಬುಡದಲಿ ಚಂದಿರನ ಬೆಳಕು ಅವಳು ಕಾದಳು ಅವನ ಕೊಳಲನಾದಕ್ಕಾಗಿ. ಹೂವಿನ ಪಕಳೆ ತುಂಬ ಗಂಧ ವಲಸೆ ಹೋದ ಹಕ್ಕಿಗಳ ನೆರಳು ತೆನೆ ತೂಗಿದ ಬಯಲ ಆಲಯ ಮೌನವರಿಸಿ...

ಜೀವನದ ಹಗಲಿನಲಿ ಕನಸು ಸುಳಿವಂದದಲಿ, ಆಕೆ ಬಂದಳು ಮುಂದೆ; ನಡುಹಗಲು ಬರುತಿರಲು ಅಳಿವಡೆವ ನೆರಳಿನೊಲು ಹಾರಿಹೋದಳು ಹಿಂದೆ! ಅವಳಿಲ್ಲ, ಈಗೆನ್ನ ಮನಸು ಕನಸಿನ ಅನ್ನ. ಕಂಗೆಟ್ಟ ಶಶಿ ನಾನು; ದಿನ ದಿನಕು ಸಣ್ಣಾಗಿ, ದುಃಖದಲಿ ಹಣ್ಣಾಗಿ, ಅಳಿವ ದಾರಿಗೆ ಹ...

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ? ಜನನದೊಂದಿಗೆ ಸಂಕಷ್ಟ ಚಿಕ್ಕಂದಿನಿಂದಲೇ ಬಡತನ ಜ್ಞಾನಾರ್ಜನೆಗೆ ಕೊರತೆ ಕುಟುಂಬದಲ್ಲಿ ಪ್ರೀತಿ ನಾ ಕಾಣೆ ಸರ್ವರ ಕಾಟಕ್ಕೆ ನಾ ಬಲಿಪಶು ಹೆಣ್ಣಿಗೆ ಇಂಥ ಜೀವನ ಬೇ...

ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ ಒರ...

ಸುಗ್ಗಿಯ ಹಬ್ಬವು ಬಂದಿದೆ ಅಣ್ಣ ತಂದಿದೆ ಸಂಭ್ರಮ ಸಗ್ಗದ ಬಣ್ಣ ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ ರೈತನ ಬವಣೆಯ ಕಾಲವು ಕರಗಿದೆ ಖಾಲಿಯಾ ಕಿಸೆಯದು ಝಣ-ಝಣ ಎಂದಿದೆ ಬತ್ತದ ಕಣಜವು ಉಕ್ಕೆದ್ದು ಬಂದಿದೆ ಮಾಮರದ ಸೆರಗಿನಲಿ ಹೂ ಬಿಸಿಲ ವೈಯಾರ ಕೋಕಿಲದ ...

ಮುಂಜಾನೆಯ ಹಗಲಲ್ಲಿ ಮಿಂದ ಬೆಳ್ಳಿ ನಾನಾಗಿ ಹಸನಾದ ಬಾಳಿಗೆ ಹೊಸತಾದ ಪ್ರೀತಿ ತುಂಬಿದ ಭಾಸ್ಕರ ನೀನಾಗಿ || ಋತು ಚಕ್ರಧಾರೆ ಹೊನಲಲ್ಲಿ ಓಕುಳಿ ಚೆಲ್ಲಿದ ವಸಂತ ನೀನಾಗಿ ನಿನ್ನಲಿ ಬೆರೆತ ಮನವು ತಂಪನೊಸೆದ ಪ್ರಕೃತಿ ನಾನಾಗಿ || ಹೊಂಬೆಳಕ ಸಂಜೆಯಲಿ ಮೇಘ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....