ಸ್ತ್ರೀ ರೋಧನೆ

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ
ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ?

ಜನನದೊಂದಿಗೆ ಸಂಕಷ್ಟ
ಚಿಕ್ಕಂದಿನಿಂದಲೇ ಬಡತನ
ಜ್ಞಾನಾರ್ಜನೆಗೆ ಕೊರತೆ
ಕುಟುಂಬದಲ್ಲಿ ಪ್ರೀತಿ ನಾ ಕಾಣೆ
ಸರ್ವರ ಕಾಟಕ್ಕೆ ನಾ ಬಲಿಪಶು
ಹೆಣ್ಣಿಗೆ ಇಂಥ ಜೀವನ ಬೇಕೇ?

ಸ್ತ್ರೀಯು ಪ್ರತಿಯೊಬ್ಬರ
ಮನಗೆಲ್ಲಲು ಹಗಲಿರುಳು ಪ್ರಯತ್ನ
ನಂಬಿಗಸ್ಥ ಪುರುಷನೊಂದಿಗೆ
ಸಹವಾಸ ಜೀವನ ನರಕ
ಹುಟ್ಟಿ ಬಂದೆ ನಾ ಈ ಭವದೊಳಗ
ಕೆಟ್ಟು ಹೋದೆ ನಾ ಪುರುಷ ಸಹವಾಸಕ್ಕೆ
ಕಲಿಯುಗದಲ್ಲಿ ಇಲ್ಲ ಸುಖಿ ಜೀವನ
ಬಾಳ್ವೆ ಮಾಡು ನೀ ದುಖಿ ಜೀವನ.

ನಾವೆಲ್ಲಿ ನೋಡಿದಲ್ಲಿ
ಸ್ತ್ರೀ ಬದುಕು ಸಂಕಷ್ಟದಲ್ಲಿ
ಎಲ್ಲಿ ಯಾವಾಗ ಬರಲಿ ಮಾತು
ಬರಲಿ ಸ್ತ್ರೀಗೆ ದುಖಿ ಜೀವನ
ಬಿಳಿಯ ಹಾಳೆಯೇ ಮಹಿಳೆ ಬದುಕು
ಅಳಿದರೆ ಉಳಿವು ಅಸಾಧ್ಯ
ಸಂಕಷ್ಟ ಶೃಂಖಲೆ ಬದುಕು

ಭುವಿಯ ಮೇಲೆ ಮಡುಗಟ್ಟಿ
ನಿಂತಿದೇ ಅಮಾನವೀಯ ಹೆಣ್ಣಿನ ರೋಧನೆ
ಆಲಿಸೋ ಮಹಿಳೆ ಭವಣೆ
ರಕ್ಷಿಸೋ ಹೆಣ್ಣ ಜಾತಿಯ
ಬೆಳೆಸಿ ಉಳಿಸೋ ಧರೆಯಲ್ಲಿ
ಕೊರೆದು ಕೊರೆದು ಸಾವನ್ನಪ್ಪುತಿದೆ
ಜಗದೆಲ್ಲೆಡೆಯೂ ಮಹಿಳೆಯ ಜೀವ
ಜನ್ಮ ನೀಡಿದರೆ ಸಿರಿವಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸ್ಸಿನಿಂದ ಇಳಿದವಳಿಗೆ
Next post ಹೂಜಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…