ಮತ್ತೆ ಬೆಳಗಾಗಿದೆ ಬೆಳಕಿನ ಸಮುದ್ರದಲ್ಲಿ ಜಗತ್ತು ಮುಖ ತೊಳೆದುಕೊಳ್ಳುತ್ತಿದೆ. ಸೂರ್ಯ ಮೈಮುರಿಯುತ್ತಿದ್ದಾನೆ. ಪೇಪರು ಕೊಡುವ ಪುಟ್ಟ ಹುಡುಗನಿಗೆ ಕರೆಗಂಟೆ ಎಟುಕುತ್ತಿಲ್ಲ ಹಾಲು ಕೊಡುವ ಮುದುಕ ಸಾವಿನ ಸುಖದಲಿ ಮೈಮರೆತಿರುವ ಹೆಂಗಸರನ್ನು ಬದುಕಿನ ...

ನಲ್ಮೆಯ ಗೂಡು ನಾದಮಯ ನಲ್ಲನಾ ನುಡಿಯೂ ಪ್ರೇಮಮಯ ಸಂಚರೀಪ ವಾಂಛೆಗೆ ಅಳುಕುವುದು ಮೈ ಮನ, ಎನ್ನೋಲವು ಆ ಒಲವ ಬೇಡುವುದು ಅನುದಿನ. ಈ ಹೊತ್ತು ಅವನಿರದೆ ತಿಂಗಳನು ಬಂದಿರಲು, ಹುಣ್ಣಿಮೆಯು ಹಗೆಯಾಗಿ ಕೊಲ್ಲುತಿರಲು ಹೇಗೋ ಏನೋ ಹಾಗೆ ಹಂಬಲಿಕೆ ಕನವರಿಕೆ ಅ...

ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ ಬಗ್ಗೆ ಮಾತಾಡುತ್ತ ನಡೆದಿದ್ದವು. ಅವಳು ಸೀರೆಯನ್ನು ಮೊಣಕಾಲತನಕ ಎತ್ತಿಹಿಡಿದಿದ್ದಳು. ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ ಧಾರಾಳ ತೊಯ್ದಿದ್ದೆವು. ಇಷ್ಟು ವರ್ಷಗಳ ನಂತರ ನನಗೀಗ ಏಕೆ ಈ ನೆನಪು ಇಷ್ಟು ...

ಯಾರದು! ಯಾರದು!! ಯಾರದು ಸೇನೆ? ಯಾರಿಗೆ ಬಂದಿದೆ ಉಳಿಯದ ಬೇನೆ? || ಹಿಮಗಿರಿಗಳ ನಡು ಪರ್ವತಸಾನು ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು || ಬೆಂಕಿಯ ಕಣ್ಣನು ಅಡಗಿಸಿಕೊಂಡು ಉಲುಹಿನ ಸುಳುಹನು ಮಡಗಿಸಿಕೊಂಡು || ಧ್ಯಾನದ ಮೌನದ ಆಳದ ತಳದಲಿ ಸುಳಿವವರಾರೀ...

ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ – ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ ಶಬ್ದ ಪವಣಿಸುವ ತಂತ್ರ. ಕವ...

ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ|| ಬಿಳಿ ಮುಗಿಲ ಹಾರ...

ನಾನೇನೋ ಹೇಳಿದೆ ಬಹುಶ: ನೀನು ಕೇಳಿಸಿಕೊಳ್ಳಲಿಲ್ಲ ನೀ ನನ್ನ ಹುಡುಗತನ ಕಸಿಯಬಹುದು ಆದರೆ ನನ್ನ ಹುಡುಗಾಟವನು ಅಲ್ಲ ಪ್ರತಿ ಮಾತಿಗೊಂದು ಉತ್ತರವಿರಲಾರದು, ಪ್ರತಿ ಒಲವಿನ ಸಂಗತಿ ಕೆಟ್ಟದೇನೂ ಅಲ್ಲ. ಹೀಗೆ ಕುಡಿದು, ನಶೆಯಲಿ ಓಲಾಡುವೆನು ಆದರೆ ಪ್ರತಿ ...

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...