
ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ...
ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ– ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯ...
ನಿನಗೆ ಒಂದು ಮಾತು ಹೇಳಬೇಕು. ಅದು ಏನು ಅಂತ ನಿನಗೆ ಗೊತ್ತಿದೆ ಅಂತ ಅಂದು ಕೊಂಡಿದ್ದೇನೆ. ಅದನ್ನು ನಿನಗೆ ಯಾಕೆ ಹೇಳಲ್ಲ ಅಂದರೆ ಅದನ್ನೆಲ್ಲ ನೀನು ನನಗೆ ಕೊಟ್ಟಿದ್ದೀ. ನೀನು ಕೊಟ್ಟಿರುವಷ್ಟು ಅದನ್ನು ನಾನು ನಿನಗೆ ಕೊಡಲು ಆಗಲ್ಲ ಅಂತ ನನಗೆ ಚೆನ್ನ...
ಒಡಕು ಮಸರಿನ ಸಿಡಿದ ಎಸರಿನ ಶಬ್ಬ ಡಂಗುರ ನಿಲ್ಲಲಿ|| ಉಲಿಯ ನುಲಿಯಲಿ ಬಲಿಯ ನೂಲದೆ ಶಬ್ದ ಗಂಟೆಯ ಮೀರುವೆ ತಮಟೆ ಜಾಗಟೆ ಕಾಳಿಭೇರಿಯ ಶಂಖವಾದ್ಯವ ದಾಟುವೆ ಮಾತು ಸುಣ್ಣಾ ಮೌನ ಮಲ್ಲಿಗೆ ಹೂವಿನೆದೆಯಲಿ ಮಲಗುವೆ ಜಾತ್ರಿ ಬೇಡ ತೇರು ಬೇಡ ಕಳಸ ಗೋಪುರ ತೊರ...
ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ ಕೇಳಿ ಹಾಕಿಸಿಕೊಂಡು ಹೊಡೆದದ್ದೆ ಎಲ್ಲ...
ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ ನಿನ್ನ ನಾಮ ಸ್ಮರಣೆಯಲ್ಲಿ ಎನ್ನ ನಿಲು...
ಷರತ್ತುರಹಿತ ಮುಕ್ತತೆ ಹಸಿವಿನ ಆಗ್ರಹ ಆಪ್ತ ಬದ್ಧತೆ ರೊಟ್ಟಿಯ ಯಾಚನೆ. ಮುಕ್ತತೆ ಬದ್ಧತೆಗಳ ಪ್ರಮಾಣಗಳ ಹುಡುಕಾಟದಲ್ಲಿ ನಿತ್ಯ ಆಕರ್ಷಣೆ ಘರ್ಷಣೆ. *****...













