ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ ಏನೋ ಕೊರತೆ ಕಾಣುತ್ತಿದ್ದ ಈ ಮನ ಏಕೆ ಬಯಸುತಿದೆ ನಿನ್ನ ಗೆಳೆತ...

ಮನೆಯ ಕಟ್ಟುವೊಡಲ್ಲಿ ಬಡವ ತಾ ಧನದ ಮಿತಿಯೊಳದರ ಸೌಂದರ್‍ಯ ವನವಗಣಿಪ ತೆರದೊಳೆನ್ನ ಕವನವು ಘನ ವಿದ್ವಾಂಸನಾನಲ್ಲ ಛಂದ ಬಂಧ ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ *****...

ತರು ಲತೆ ಗಂಡು ಹೆಣ್ಣಂತೆ ಒಂದಕ್ಕೊಂದು ಶೃಂಗಾರ, ಅವಶ್ಯಕವಲ್ಲವೆ ! ಅಪ್ಪಿದವು ಸಂಸಾರ ಶುರುವಾಯಿತು. ಬಳ್ಳಿ ಲಲನೆ ನೆಲದೊಳಗೆ ಬೇರಿಳಿಸದೆ ಪ್ರಿಯಕರ ತರುವಿನೊಳಗಿಳಿಸಿ ನಖ ಶಿಖಾಂತ ಆನಕೊಂಡಾದ ರೀತಿ ಬಿಗಿದು ಸತ್ವ ಹೀರಿ ಹೀರಿ ಬಲಿಯುವುದು; ವಿಜೃಂಭಿ...

ಎಲ್ಲರೂ ದಡ ಸೇರಿದರು ನಾನು ಮಾತ್ರ ನಡು ನೀರಿನಲ್ಲಿ ಎಲ್ಲರೂ ಹೊಳದಾಟಿದರು ನಾನು ಮಾತ್ರ ಮುರುಕು ದೋಣಿಯಲ್ಲಿ ಕತ್ತರಿಸುತ್ತಿದೆ ಚಳಿ ತತ್ತರಿಸುತ್ತಿದೆ ಎದೆ ನಡುಗಿ ಅಲೆಯೊಳಗೆ ತೇಲಿ ಬಿಟ್ಟಿರುವೆ ಕಂಬನಿಯ ಮಾಲೆ ಇರುವುದೊ ಇಲ್ಲವೊ ನಾನರಿಯೆ ನನ್ನ ಪಾ...

ಬೇಸರವಾಗಿದೆ ನಗರದಲಾಟ ಧೂಸರ ಧೂಳಿನ ಜೀವನವು ಆಶಿಸಿ ಚಿಗುರೊಳಗಾಡಿತು ಗಾಳಿ ಭಾಷೆಗೆ ನಿಲುಕದ ಭಾವಕೆ ಬೆಂದು. ಬೇಗ ನಡೀ ಹೊರಡೇಳು ನಡೀ ಕೂಗಿದಳಾವಳೊ ಕಾಡಕಿನ್ನರಿಯು ಸೂಟಿಯು ಸಂದರೆ ನಂದಿಯ ಕೂಟ ನೋಟಕೆ ಹಬ್ಬವು ಜೋಗದ ಪಾತ ಮಾಟದ ಪುತ್ಥಳಿ ಬೇಲೂರ ನೋಟ...

ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ ನಾನು ನಿಮ್ಮ ಕವನ ಬೇಡ ಧಾವಂತ | ಉಳಿಸಿ ಜೀವಂತ ಕೊಳ್ಳಿ ನನ್ನ ನಮನ //ಪ// ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ ಕತ್ತಲ ಪರದೆಗಳಿಲ್ಲಿ ತಂಪು ನೀಡುವ ತುಂಬು ಚಂದ್ರನಿಗೆ ತಾಪದ ಮುತ್ತಿಗೆಯಿಲ್ಲಿ ಬೀಸಿ ಬರುವ ತಂಗಾ...

ನೀನಿರುವ ತನಕ ನನಗಿಲ್ಲ ಚಿಂತೆ ನಿನ್ನಾಸೆರೆಯಲಿ ನಾನಾಗುವೆ ಕವಿತೆ || ಪ್ರೀತಿಯ ಪದಗಳ ಸುಮವು ನಾನು ದುಂಬಿ| ನೀನಾಗಿ ಬರಲು ಹಿಗ್ಗುವೆನೂ || ವಿರಹದ ಚಿಲುಮೆಯಲ್ಲಿ ಆಷಾಡ ಕಳೆದಿಹೆನು ಹಣೆಯ ಕುಂಕುಮವಾಗಿ ನೀನಿರಲು ನನಗಿಲ್ಲ ಚಿಂತೆಯು || ಶ್ರಾವಣಕೆ ...

ಅಡ್ಡ ಬ್ರಾಹ್ಮಣರ ಬೀದಿನಡುವಿನ ಉದ್ದನೆ ಗರುಡಗಂಬ ಸುತ್ತಮುತ್ತ ಹತ್ತಾರು ಊರಲ್ಲಿ ಇಲ್ಲದ ಏಕಶಿಲಾಸ್ತಂಭ. ವಠ ವಠಾರದ ನಲ್ಲಿ ಬಚ್ಚಲು ಕಥೆ ಒಲೆ ಉರಿಯದ ವ್ಯಥೆ ಯಾರೋ ನಾರಿ ಕತ್ತಲು ಜಾರಿ ಮಣ್ಣ ಸಂದಿಗಳಲ್ಲಿ ಬಣ್ಣವುರಿದ ಜೊತೆ- ಇಂಥ ಗುಲ್ಲನ್ನೆಲ್ಲ ಇ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...