ತರು ಲತೆ ಗಂಡು ಹೆಣ್ಣಂತೆ
ಒಂದಕ್ಕೊಂದು
ಶೃಂಗಾರ, ಅವಶ್ಯಕವಲ್ಲವೆ !
ಅಪ್ಪಿದವು
ಸಂಸಾರ ಶುರುವಾಯಿತು.

ಬಳ್ಳಿ ಲಲನೆ
ನೆಲದೊಳಗೆ ಬೇರಿಳಿಸದೆ
ಪ್ರಿಯಕರ ತರುವಿನೊಳಗಿಳಿಸಿ
ನಖ ಶಿಖಾಂತ
ಆನಕೊಂಡಾದ ರೀತಿ
ಬಿಗಿದು ಸತ್ವ ಹೀರಿ ಹೀರಿ
ಬಲಿಯುವುದು; ವಿಜೃಂಭಿಸುವುದು.

ಹುಂಬ ತರು
ಮರ್ಯಾದೆ, ನಿಯಮಗಳಿಗಂಜಿ
ಬಿಡಲಾಗದೆ, ಕಟ್ಟಿಕೊಳ್ಳಲಾಗದೆ
ಒಳಗೊಳಗೆ ಒದ್ದಾಡಿ ಒದ್ದಾಡಿ
ಸತ್ತು ಹೋಗುವುದು.

ಕೀಟ ಜಗದ ಹೆಣ್ಣು
ಕೂಡಿದ ಇನಿಯನನ್ನೆ
ತಿಂದು ಮುಗಿಸಿ ಬಿಡುವುದೆಂದರೆ
ಇಲ್ಲೂನು… ಅದೇ ನಡೆಯುತ್ತಾ !
*****