ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ
ನಾನು ನಿಮ್ಮ ಕವನ
ಬೇಡ ಧಾವಂತ | ಉಳಿಸಿ ಜೀವಂತ
ಕೊಳ್ಳಿ ನನ್ನ ನಮನ //ಪ//
ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ
ಕತ್ತಲ ಪರದೆಗಳಿಲ್ಲಿ
ತಂಪು ನೀಡುವ ತುಂಬು ಚಂದ್ರನಿಗೆ
ತಾಪದ ಮುತ್ತಿಗೆಯಿಲ್ಲಿ
ಬೀಸಿ ಬರುವ ತಂಗಾಳಿಗೆ ಕೂಡ
ಕಪ್ಪು ಹೊಗೆಯ ಘಾಟು
ಆಮ್ಲಜನಕ ಬೇಕೆನ್ನುವವರಿಗೆ
ಫಿಕ್ಸಾಗಿದೆ ರೇಟು!
ಜಲದ ಕರುಣೆಯ ಭೂಮಿ ತಾಯಿಗೆ
ಬೋರ್‌ವೆಲ್‌ಗಳ ತಿವಿತ
ಚಿನ್ನ ಕೊಟ್ಟರೂ ಕನ್ನ ಹಾಕುವ
ಗಣಿಗಳ್ಳರ ಇರಿತ
ಅನ್ನ ಕೊಡುವ ನೆಲದವ್ವನೊಡಲಿಗೆ
ರಾಸಾಯನಿಕ ವಿಷ
ವಿಷವ ನುಂಗುವ ಮಂದಿ ರಕ್ತ ವಿಷ
ಬದುಕು ಹೇಗೆ ಹರುಷ?
*****