ನೀನಿರುವ ತನಕ
ನನಗಿಲ್ಲ ಚಿಂತೆ
ನಿನ್ನಾಸೆರೆಯಲಿ
ನಾನಾಗುವೆ ಕವಿತೆ ||

ಪ್ರೀತಿಯ ಪದಗಳ ಸುಮವು
ನಾನು ದುಂಬಿ| ನೀನಾಗಿ
ಬರಲು ಹಿಗ್ಗುವೆನೂ ||

ವಿರಹದ ಚಿಲುಮೆಯಲ್ಲಿ
ಆಷಾಡ ಕಳೆದಿಹೆನು
ಹಣೆಯ ಕುಂಕುಮವಾಗಿ
ನೀನಿರಲು ನನಗಿಲ್ಲ ಚಿಂತೆಯು ||

ಶ್ರಾವಣಕೆ ಬಂದ
ಸಿರಿಧಾರೆಯಂತೆ
ಬಿರಿದ ಹೂ ನಗುವಂತೆ
ನಮ್ಮ ಬದುಕು ಸಿರಿತನವು ||

ಏನೇ ಬರಲಿ ಏನೇ ಆಗಲಿ
ಸಂಸಾರದ ಕುಲ ಮನೆಯ
ದೀವಿಗೆ ಹಚ್ಚಲು ನಾನು
ನೀನೇ ನನ್ನ ಚೇತನವು ||
*****