ಏಕೆ ಸೋತಿತು ಈ ಮನ?

ಏಕೆ ಸೋತಿತು ಈ ಮನ?
ನಿನ್ನ ಕಂಡ ಮೊದಲ ಕ್ಷಣ|
ಜನ್ಮ ಜನ್ಮಾಂತರದ ಬಂಧವೊ
ಈ ಜನ್ಮದ ಹೊಸಾ ಮೈತ್ರಿಯೊ ||

ಯಾರನು ಒಪ್ಪದಿದ್ದ ಈ ಮನ
ನಿನ್ನ ನೋಡಲೇಕೆ
ಅನ್ನಿಸುತಿದೆ ಒಂಟಿತನ|
ಎಲ್ಲರಲ್ಲೂ ಏನೋ ಕೊರತೆ
ಕಾಣುತ್ತಿದ್ದ ಈ ಮನ
ಏಕೆ ಬಯಸುತಿದೆ ನಿನ್ನ ಗೆಳೆತನ||

ಏಷ್ಟೋ ಹದಿಹರೆಯದ
ಹೆಣ್ಣುಗಳ ಧ್ವನಿಯ ಕೇಳಿಯು
ಕೇಳದಂತಿರುತ್ತಿದ್ದ ಈ ಮನ
ಹಾತೊರೆಯುತಿದೇಕೆ
ತಿಳಿಯಲು ನಿನ್ನ ಚಲನವಲನ||

ಲಕ್ಷ ನೋಟಗಳು ನಿನ್ನ ಚೆಲುವ
ಬಣ್ಣಿಸಿರಬಹುದು|
ಸಾವಿರಾರು ಹೃದಯಗಳು
ನಿನ್ನ ಪ್ರೀತಿಸೆ ಆಶಿಸಿರಬಹುದು|
ಆದರೆ ನಾನು ಮಾತ್ರ ನಿನ್ನ
ಮನಸಾರೆ ಪ್ರೀತಿಸಿ
ಆರಾಧಿಸುವೆ ಹೃದಯದಲಿ||

ಸಾಕು ನಿನ್ನ ಈ ಒಂಟಿಜೀವನ ನಡಿಗೆ
ನಾ ಬರುವೆ ನಿನ್ನ ಜೊತೆಯಾಗೆ|
ಆರಿಸಿಕೊ ಎನ್ನ, ನಾ ಬರುವೆ
ಜೀವನಪೂರ್ತಿ ಬಾಳಸಂಗಾತಿಯಾಗಿ ನಿನ್ನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರಾಡುವ ನಗರ
Next post ಕುರ್ಚಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…