ಭೂಮಿ ಮತ್ತು ನೀರು | ನಮ್ಮ ಹಕ್ಕು ಹಕ್ಕಿಗೆ ನಮ್ಮ ಗೌರವ | ಎಲ್ಲ ಕಾಲಕ್ಕೂ //ಪ// ಭೂಮಿ ಯಾರಪ್ಪನದು ಅಲ್ಲ ನಮ್ಮ ನಿಮ್ಮ ಸ್ವತ್ತು ನೀರಿಗೆ ದೊಣೆನಾಯಕನಪ್ಪಣೆಯೆ? ತೋಳ ಹಳ್ಳಕೆ ಬಿತ್ತು! ಗತಿಸಿದ ಕಾಲ ನಿಮ್ಮದು ಏನೊ ನಮ್ಮದು ವರ್ತಮಾನ ಹಗಲುಗನಸು ಬೇ...

ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ ಕಾಮನಬಿಲ್ಲ ಸಂಭ್ರಮದೊಲುಮೆಯತ್ತ ಸೋಲಿಲ್...

ದೀಪಗಳ ದಾರಿಯಲಿ ನಡುನಡುವೆ ನೆರಳು, ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು, ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು, ಕಪ್ಪು ಮೋರೆಯ ಬೇಡ ಕ...

ಗುರುವೆ ನಮೋ ಶ್ರೀ ಗುರುವೆ ನಮೋ ಸದ್ಗುರುವೆ ನಮೋ ವರಗುರುವೆ ನಮೋ || ಪ || ಗುರುವೇ ಹರ ನಮೋ ಗುರುವೇ ಹರಿ ನಮೋ ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.|| ತಾಯಿಯ ಒಲುಮೆ ತಂದೆಯ ಬಲುಮೆ ಬಂಧು ಬಳಗ ಬಲ ನೀನೆ ಗುರು ಲೋಕಕ್ಕೆಲ್ಲಾ ಹಿರಿಯನು ನೀನು ದೇ...

ಶನಿಯಂತೆ ನನ್ನ ಬೆನ್ನು ಹತ್ತಿದವನೆ ನನ್ನ ಮಗನೇ ಜನಮೇಜಯನೆ ಕೇಳು : ನನ್ನ ನೆರಳಾಗಬೇಡ ಬೆಳಕಾಗುವುದೂ ಬೇಡ ನನ್ನ ಧ್ವನಿಯಾಗಬೇಡ ಪರಾಕು ಕೂಗಬೇಡ ಮೂರು ಕಾಸಿನವನೆ ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ ಧ್ಯಾನದಲ್ಲಿ ...

ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ ಕಂಠವ ಮಳೆಯು ಗುಳುಗುಳು ನಗಿಸಲಿ ||೨|| ಬಿಲ್ವ ಬಳುವಲ ಮಲೆಯು ಬೆಳವಳ ಹ...

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು || ಗು...

ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ… ಇಲ್ಲಿ ಬ್ರಹ್ಮಚಾರಿಯಾಗಿ ನಾ...

ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...

ನೀಗಿ… ನೀಗಿ… ನೀಗಿ… ನನ್ನ ನೀನು, ನಿನ್ನ ನಾನು ಕಂಡರಾಗದಂತ ಸಣ್ಣತನವ ನೀಗಿ. ನಿನ್ನ ಕೈಯ ನಾನು ಹಿಡಿವೆ ನೀನು ಹಿಡಿ ಇನ್ನೊಬ್ಬರ ಹೀಗೆ ಮುಂದೆ ಸಾಗುವ ಬದುಕಿನಲ್ಲಿ ಪ್ರೀತಿ ಕಾಣುವ. ಏನೇ ಎಡರು ತೊಡರು ಬರಲಿ ಕೂಡಿ ಬದುಕುವ ನನ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...