ತಾನಗಾನಗಳಲ್ಲಿ ತಣಿಸಿಕೊಳುವದು ಮನವ ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ ಕುಕಿಲುವದು ಋತುಪತಿಯ ಐಸಿರಿಯ ಈ ಘನವ ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ ಕಸುವು ತನಗಿಲ್ಲೆಂಬ ಕಳವಳಕೆ ಎಡೆಯಿಲ್ಲ ...

ರಾಜ ಮುತ್ತು ರಾಜ ಕನ್ನಡದ ನೀ ಮುದ್ದು ರಾಜ || ಪ || ರಂಗಭೂಮಿಯ ಕೃಷಿ ಅಂಗಳದಲಿ ನಟನೆಯ ಕಲೆಯ ಬೀಜ ನೀವಾಗಿ ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ ಗಾನ ಕೋಗಿಲೆಗಳ ಗಾನಸಿರಿಯಾಗಿ ಗಂಧರ್ವ ಲೋಕವ ನೀ ಸೃಷ್ಟಿಸಿ...

ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚ...

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು. ಜಲದಮೇಲ್ ಮಲಗುವ ಮ...

ಸಾವಯವವೆಂದೇಕೆ ಬರಿದೆ ಗಳಹುವಿರಿ ನಾವೇನೆಲ್ಲವನು ತಿಂದೇನಾಗಿಹುದೆನ್ನದಿರಿ ಸಾವಯವವೆಂದೊಡದು ಜೀವ ದೇವ ನಿಯ ಮವಿದ ಮೀರಿದರೆ ರಸ್ತೆ ನಿಯಮದವೊಲ್ ಅವಗಣಿಪರೇರಿದರೆ ಅಪಘಾತವೇರುವುದು – ವಿಜ್ಞಾನೇಶ್ವರಾ *****...

ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ ಮಹಾತ್ಯಾಗಿ ಎನ್ನುವ...

ಬರೆಯಬೇಕು ನಾ ಏನನ್ನಾದರೂ ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ ಬರೆಯಬಲ್ಲೆನಾದರೂ ನಾನು ಉಳಿದಿರುವುದಾದರೂ ಏನು? ಶತಶತಮಾನಗಳಿಂದ ಬರೆದು ಬರೆದು ನವರಸಗಳೆಲ್ಲವ ಅರೆದು ಕುಡಿದು ಮಾಡಿ ಸರಸತಿಯ ಭಂಡಾರ ಲೂಟಿ ನನಗೇನು ಸಿಕ್ಕದು ಬರೀ ಪಾಟಿ. ಪಂಪ ರನ್ನ ...

ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ- ಯನೇರಿ ಸರದ ಸುಯ್ಯನೆ ಶೃತಿಯಲ್ಲಿ ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ ನವಿಲು ನೃತ್ಯಕೆ ತಾಳ ಮೇಳೈಸಿ ವೀಣಾತರಂಗ ತನ್ಮಯಳೆ ತಾಯೆ ತರವೇನೆ ನಿನಗೀಪರಿಯು? ಕನ್ನಡ ತಾಯ ತಾಪತ್ರಯಂಗಳಂ ಎವೆಯಿಕ್ಕದನುದಿನ ನೋಡಿ ನೋಡಿ...

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು. ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ ಭಾವ. ಅವಳು ದುಃಖದ ಮಗುವಿಗೆ ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ. ಜಗದ ಜನರ ಬದುಕಿನ ಘಮ ಅರಳಿ ಅಡುಗೆ ಮನೆಯ ತುಂಬ ಬಿಳಿಬಿಳಿ ಅ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...