ಪ್ರೀತಿ ಎಂದರೆ ಏನೆಂದು ಕೇಳುವ ನನ್ನಿನಿಯಾ ಇರುಳಿನಲಿ ಬಯಸುವನು ನನ್ನಾಂಗಾಂಗ ಸವಿಯಾ ಅರಿಯಲಾರನು ಮಧುರ ಭಾವನೆಗಳ ತನಿಯಾ ಉಣಿಸಿ ನನ್ನೆದೆಗೆ ಕಾಮನೆಗಳ ಕಹಿಯಾ *****...

ಎಷ್ಟೊಂದು ಸುಲಭ ಇದು ಸುಳ್ಳು ಹೇಳುವುದು ನಾನೇ ನಿನ್ನನ್ನು ಕರೆದು ನೀನೇ ಕರೆದೆ ಎನ್ನುವುದು. ಆಸೆ ತುಂಬಿಟ್ಟುಕೊಂಡು ಏನೂ ಬೇಡ ಎನ್ನುವುದು ಹಸಿವೆಗೆ ಬೇಯುತ್ತಾ ಉಂಡಂತೆ ನಟಿಸುವುದು, ಕೊನೆಗೆ ದಾಹವಾದರೂ ಉಗುಳು ನುಂಗುವುದು ಈ ಸುಳ್ಳು ನಿಷ್ಪಾಪಿ ನ...

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ – ಗಂಟೆ –...

ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ ಬಿತ್ತೋಣ ಕರುಣಾಳ ಜನರ ಮನದಲಿ ಸಿರಿ ಕನ್ನಡದ ...

ನೀನು ದಯಾಮಯ ಕರುಣಾಸಾಗರ ಕ್ಷಮಾಗುಣ ಸಂಪನ್ನ, ನಾನು ನಿನ್ನ ಶರಣ ಚರಣದಾಸ, ನಿನ್ನಂತೆಯೇ ಕ್ಷಮಯಾಧರಿತ್ರಿ. ನೀ ನನಗೆ. ಕೊಟ್ಟ ಸುಖಕೆ ನಿನ್ನ ದಯೆ ಎಂದು ವೆಂದಿಸಿದೆ. ನೀ ಕೊಟ್ಟ ಕಷ್ಟ ಕೋಟಲೆಗೆ ನಿನ್ನ ದೂರದೆ ಕರ್ಮ ನನ್ನದೆಂದು ನಿಂದಿಸಿ ನನ್ನನೇ ನಿ...

ನಿಲ್ಲು ನಿಲ್ಲು ನಿಲ್ಲು ಮನವೆ ಮರಳಿ ಯಾತಕ ಮರೆಯುವಿ ಟೊಂಗಿ ಟೊಂಗಿಗೆ ತೂರಿ ಹಾರುವಿ ಮಂಗನಾಟವ ಮಾಡುವಿ ಯಾರು ಯಾರಿಗೊ ಶಿವಾ ಅನ್ನುತ ಗುಡ್ಡ ಬೆಟ್ಟಾ ತಿರುಗಿದಿ ಗಡಿಗಿ ಮಡಕಿ ಕುಡಿಕಿ ಚಟಿಗಿಗೆ ಅಡ್ಡ ಉದ್ದಾ ಉರುಳಿದಿ ಚರ್ಮ ಚೀಲಕ ಮಣ್ಣ ಹೆಂಟಿಗೆ ದ...

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ – ನನ್ನವ್ವನಿಗೆ ಅಡವಿಟ್...

ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ – ವಿಜ್ಞಾನೇಶ್ವ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...