ಕನ್ನಡ ಕೃಷಿ

ಕೃಷಿಯ ಮಾಡೋಣ ನಾವು
ಕನ್ನಡಾಂಬೆಯ ಮಡಿಲಲಿ
ಸಿರಿ ಕನ್ನಡದ ನೆಲದಲಿ ನಾವು
ಕನ್ನಡದ ಕೃಷಿಯ ಮಾಡೋಣ.

ತುಂಗ-ಭದ್ರ ಕೃಷ್ಣೆ ಕಾವೇರಿಯ
ಜೀವ ಜಲವ ಹರಿಸಿ
ಜನಮನವ ಹದವಾಗಿಸಿ
ಜನಮನದ ಕಳೆ ತೆಗೆಯೋಣ

ಬಿತ್ತೋಣ ಬೀಜ ಬಿತ್ತೋಣ
ಕರುಣಾಳ ಜನರ ಮನದಲಿ
ಸಿರಿ ಕನ್ನಡದ ಬೀಜವ ಬಿತ್ತೋಣ
ಕನ್ನಡದ ಫಲವ ಸವಿಯೋಣ

ಜಾತಿ ಧರ್ಮದ ಭೇದವ ಅಳಿಸಿ
ಭಾಷೆ ಭಾವನೆಯ ಕೀಳು ತೆಗೆಸಿ
ಬಾಂಧವ್ಯದ ಬೆಸುಗೆ ಹಾಕಿಸಿ
ಕನ್ನಡಾಂಬೆಗೆ ಶಿರಬಾಗಿ ನಮಿಸಿ

ದೇಶದೊಳು ರಾಜ್ಯದೊಳು
ಎಲ್ಲರೂ ಬೆರಗಾಗಿ ಮೆಚ್ಚುವಂತೆ
ಹಸನಾದ ಬದುಕು ನಡೆಸೋಣ
ಬಾಂಧವ್ಯದ ಬೆಸುಗೆ ಹಾಕೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮೆ
Next post ಮೌನ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…