ನೀನು
ದಯಾಮಯ
ಕರುಣಾಸಾಗರ
ಕ್ಷಮಾಗುಣ ಸಂಪನ್ನ,
ನಾನು
ನಿನ್ನ ಶರಣ
ಚರಣದಾಸ,
ನಿನ್ನಂತೆಯೇ
ಕ್ಷಮಯಾಧರಿತ್ರಿ.
ನೀ ನನಗೆ.
ಕೊಟ್ಟ ಸುಖಕೆ
ನಿನ್ನ ದಯೆ ಎಂದು
ವೆಂದಿಸಿದೆ.
ನೀ ಕೊಟ್ಟ
ಕಷ್ಟ ಕೋಟಲೆಗೆ
ನಿನ್ನ ದೂರದೆ
ಕರ್ಮ ನನ್ನದೆಂದು
ನಿಂದಿಸಿ ನನ್ನನೇ
ನಿನ್ನ ಕ್ಷಮಿಸಿದೆ.
*****
೧೩-೦೬-೧೯೯೨