ಎಷ್ಟೊಂದು ಸುಲಭ ಇದು
ಸುಳ್ಳು ಹೇಳುವುದು
ನಾನೇ ನಿನ್ನನ್ನು ಕರೆದು
ನೀನೇ ಕರೆದೆ ಎನ್ನುವುದು.
ಆಸೆ ತುಂಬಿಟ್ಟುಕೊಂಡು
ಏನೂ ಬೇಡ ಎನ್ನುವುದು
ಹಸಿವೆಗೆ ಬೇಯುತ್ತಾ
ಉಂಡಂತೆ ನಟಿಸುವುದು,
ಕೊನೆಗೆ ದಾಹವಾದರೂ
ಉಗುಳು ನುಂಗುವುದು
ಈ ಸುಳ್ಳು ನಿಷ್ಪಾಪಿ ನಿಜ
ಆದರೆ ಕೊಲ್ಲುತ್ತದೆ
ನನ್ನನ್ನೇ ಒಂದು ದಿನ
ಅನಂತರ ಸುಳ್ಳು ಹೇಳಲೂ
ಏನೂ ಉಳಿದಿರುವುದಿಲ್ಲ.
*****