ಒಣಗಿದ ನನ್ನವ್ವನ ಎದೆಯಿಂದ
ಝಲ್ಲೆಂಬ ಜೀವರಸ ಬತ್ತಿ
ಎಂದಿಗೂ ಬಾಯಿ ತುಂಬಾ ಗುಟುಕು
ಎಟುಕಲಿಲ್ಲ ನನ್ನ ಬಾಯಿಗೆ.
ಏಕೆಂದರೆ ನನ್ನಪ್ಪನ ಕಷ್ಟಗಳು
ಅವಳಿಗೆ ಹೊಟ್ಟೆ ತುಂಬಿಸಲಿಲ್ಲ.
ಬಡತನದ ಬೇಗೆಯಿಂದ ಬೇಸತ್ತು
ನನ್ನಪ್ಪ – ನನ್ನವ್ವನಿಗೆ ಅಡವಿಟ್ಟ ಒಂದು ದಿನ
ತಾಯಿ – ಕಂದನ ಬೇರೆ ಮಾಡಿದ್ದನು.
ನನ್ನವ್ವನಿಗೆ ಬಿಗಿದಿರುವ
ಗುಲಾಮಗಿರಿಯ ಸಂಕೋಲೆ
ಪ್ರಶ್ನೆ ಮಾಡಿದ್ದಕ್ಕೆ ನಾನು
ದೇಶದ್ರೋಹಿ ಎನಿಸಿಕೊಂಡೆ
ಈ ತಾಯಿ, ಮಾತೃಭೂಮಿ
ಸರಹದ್ದುಗಳಲ್ಲಿ ಸೈನಿಕರು
ತಾಯ್ ಸೆರೆಯ ಬಿಡಿಸಲು
ಪ್ರಾಣಗಳ ಬಲಿಗಳು
ಹೋರಾಟದ ಆರ್ಭಟದಲಿ
ಮಾರಾಟದ ಒಪ್ಪಂದಗಳನ್ನು
ಕುದುರಿಸಿದವರು ನೀವು
ಸಾಮ್ರಾಜ್ಯಶಾಹಿಗಳಿಗೆ ಕುರ್ಚಿ
ಆಸನಗಳ ಒದಗಿಸಿದ ಕುತಂತ್ರಿಗಳೇ
ಎಚ್ಚರ!
ನನ್ನವ್ವನ ಒಡಲ ಕಿಚ್ಚಿನಿಂದ
ಹೊರಬಿದ್ದ ಅವಳ ನಿಟ್ಟುಸಿರಿನಿಂದ
ನಿಮ್ಮ ಒಪ್ಪಂದಗಳು ಸದ್ದಿಲ್ಲದೆ
ಸುಟ್ಟು ಬೂದಿಯಾದಾವು.
ಹಸಿದ ಅವಳ ಕಂದಮ್ಮಗಳ
ಸಿಟ್ಟು ತಿರುಗಿ ಬಿದ್ದರೆ ನಿಮ್ಮ
ಒಪ್ಪಂದಗಳು ಹರಿದು ಚಿಂದಿಯಾದಾವು.
ನನ್ನ ಹಡೆದವ್ವನ ನೋವುಗಳು,
ಅವಳ ಕಣ್ಣೀರಿನಲಿ ತೋಯ್ದು,
ಶೃಂಖಲೆಯ ಗುಲಾಮಿ ಚರಿತ್ರೆಯನು
ಅಳಿಸಿ ಹಾಕಿ – ಹೊಸ ಚರಿತ್ರೆ
ರಚಿಸಿಯಾಳು ಅವಳ ರಕ್ತದಿಂದ.
*****
Related Post
ಸಣ್ಣ ಕತೆ
-
ತಾಯಿ-ಬಂಜೆ
"ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…