ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು? ನೋವು ಮೂಡಿದೆ ನಿನ್ನ ಗೆಲುಮೊಗದಲಿ ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ? ಗೋಸಲೀಲೆಯಕಾಂಬ ಸೌಭ...

ಅದು ಬಳ್ಳಿಯಂತೆ ಕಾಲಿಗೆ ತೊಡರುತ್ತಾ ಭಯದಂತೆ ಎದೆಯೊತ್ತಿ ಉಸಿರುಗಟ್ಟಿಸುತ್ತಾ ಎತ್ತಲೆತ್ತಲೂ ಕೂರಲೂ ನಿಲ್ಲಲೂ ಬಿಡದೇ ಹಠ ಹಿಡಿದ ಮಗುವಿನಂತೆ ಜೀವ ಹಿಂಡುತ್ತಿತ್ತು. ಪ್ರೀತಿಯಿಂದ ಮೃದುವಾಗಿ ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು ಇಂಚಿಂಚೂ ವ್ಯಾ...

“ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ? ಒಳ್ಳೇದಾಗಿರುತೀಯೆ, ನೀನು? ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ? ಕಡೆಗೆ ಏನಾಗುವ, ನೀನು?” “ಬೆಟ್ಟದಾ ಹೊಡೆಯಲ್ಲಿ ಹುಟ್ಟಿದ ಹನಿಯಾಗಿ; ತೊಟ್ಟಾದೆ ತಟುಕಾದೆ, ನಾನು. ಬೆಟ್ಟಾದೆ, ಬ...

ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು – ವಿ...

ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ ಕಣ್ಣೆಯು ಗಂಧ ಮರದ ಚಂದ ಗಾಳಿ ನಮ್ಮ ಪ್ರೇಮ ಸಾರಿದೆ ಚಂಡು ಹ...

ಉರಿಯುತ್ತಿದೆ ಬೆಂಕಿ ಧಗಧಗ ಕೆನ್ನಾಲಿಗೆಯ ಚಾಚಿ ಭಗ ಭಗ ಮುಗಿಲೆತ್ತರ ವ್ಯಾಪಿಸಿ ಆಕ್ರಮಿಸುತ್ತಿದೆ ಉದ್ದಗಲ ನೋಡಲೆಷ್ಟು ಚೆನ್ನ ಸಪ್ತ ವರ್ಣಗಳ ನರ್ತನ ಕಣ್ತುಂಬಿಸಿ ಮನ ತುಂಬಿಸಿ ಆನಂದಿಸುವ ಪರಿ ಕೇಕೆ ಹಾಕಿದ ಕೂಗಿಗೆ ಮುಗಿಲಲ್ಲಿ ಪ್ರತಿಧ್ವನಿ ಒಬ್ಬ...

೧ ಕಾಲನ ಕಲ್ಲಿನ ಚಕ್ರಗಳು! ತೊಡೆಗಳ ಎಲುವಿನ ಅಚ್ಚುಗಳು! ಪೊಳ್ಳಿನ ಹೃದಯದ ಹಂದರವು! ಗಂಡಿನ ಹೆಣ್ಣಿನ ಹುಡುಗರ ಕಳಸ! ೨ ಕಟ್ಟೋ ಮಂಗಲ ಸೂತ್ರಗಳ! ರುಂಡ ದಿಂಡಗಳ ಮಾಲೆಗಳ! ಬೆಳಗೋ ಕಂಗಳ ಕತ್ತಲೆದೀಪ! ಹಾಕೋ ನಿಡಿದುಸಿರಿನಧೂಪ! ೩ ಬಿಗಿಯೋ ಕೂದಲ ಹಗ್ಗವನ...

ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ, ಬಳಗ ದೊಡ್ಡದಾಗಿ ಸರಳವಾದ ಬಾಲ್ಯ, ಯಾವ ಅಂಜಿಕೆಯೂ ಸುಳಿಯದ ಯೌವನ, ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ, ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು. ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ. ಬಯಲ ಗಾಳಿ ಹ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...