ಒಬ್ಬರು ಬೆಳೆಯಲು ಅರಮನೆ ಕೋಟೆ ಕೊತ್ತಲು ಮತ್ತೊಬ್ಬರು ಬೆಳೆಯಲು ಗುಡಿ ಗುಡಾರ ಗುಡಿಸಲು ಕೊನೆಗೆ ಯಾರೋ ತೋಡಿದ ನೆಲದ ಮನೆಯ ಮಡಿಲು ಅದಕ್ಕೆ ಮಣ್ಣಿನ ಬಾಗಿಲು ಮುಚ್ಚಿದರೆ ಶಾಶ್ವತ ನೆರಳು *****...

ನಾವು, ಗಂಡ ಹೆಂಡತಿ, ಜಗಳ ಆಡೋಕೆ ಒಂದು ಕಾರಣ ಬೇಕೆ? ಸಂಸಾರವೆಂದಮೇಲೆ ಬಾಯಿಬಿಟ್ಟು ಹೇಳಬೇಕೆ? ಆಡುತ್ತ ಆಡುತ್ತಲೆ ನಗೆಚಾರ ಮಾಡುತ್ತಲೆ ಕೆಲಸಕ್ಕೆ ಬಾರದ ಯಾವುದೋ ಒಂದಕ್ಕೆ ಮನಸ್ತಾಪ ಉಂಟಾಗುತ್ತೆ ಮಾತಿಗೆ ಮಾತು ಬೆಳೆಯುತ್ತೆ ಚೇಳು ಕಡಿದವರಿಗೆ ಏರಿ...

ನಾಳೆ ಎಂಬುದು ಹಾಳು ಕಾಣಿರೊ – ಓ ನರ ಮಾನವರೇ ನಾಳೆ ಎಂಬುದು ಹಾಳು ಕಾಣಿರೊ \\ಪ\\ ಇಂದು ಮಾಡುವುದು ಉತ್ತಮವು ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\ ಗತಿಸಿದ ಕಾಲ ಬರುವುದೆ ಹೇಳು ನುತಿಸಿದ ದೈವ ಹೆಲ್ಪ್‌ಲೆಸ್ ಕೇಳು! ಒಡೆದ ಗಾಜು ಕೂಡುವುದ...

ಅ ಆ ಇ ಈ ಉ ಊ…. ಸ್ವರಗಳು ಇನ್ನೂ ಕೊರಳಲ್ಲೇ ಇವೆ ಕ ಖ ಗ ಘ ಚ ಛ ಜ ಝ ವ್ಯಂಜನಗಳು ಇನ್ನೂ ಬಾಯಲ್ಲೇ ಇವೆ ಆಟ ಊಟ ಓಟ ಪಾಠ ಬಣ್ಣ ಬಣ್ಣದ ಚಿತ್ರಗಳು ಕಣ್ಣಲ್ಲಿ ಅಚ್ಚೊತ್ತಿ ನಿಂತಿವೆ ಹಿಗ್ಗಿ ಹಿಗ್ಗಿ ನುಡಿಯುತ್ತಿದ್ದೆವು ಹತ್ತರ ಮಗ್ಗಿ ಜಗ್ಗಿ ...

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ ಕಾಲ ಮಣಿಯುವ ಬದಲು ಅವುಗಳೇ ಸಮೆದಿ...

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ ಕಂಠ ಸಿರಿ ನೀನು ಆಲಿಸುವ ಕರಣವಾಗಿ ನ...

ವಿಷ ಸಿಂಪಡಿಸಿ ಶುಚಿಗೊಳಿಸುವಾಗ ಕಂಡ ನೋಟಕ್ಕೆ ಹೃದಯ ಮಿಡಿಯಿತು, ಕೈ ತನ್ನ ಕೆಲಸ ಬಿಟ್ಟಿತು. ಹೆಣ್ಣು ಜಿರಳೆ ಮೊಟ್ಟೆ ಇಡುತಿದೆ, ಅನುಭವಿಸುತಿದೆ ಪ್ರಸವ ವೇದನೆ. ಹೆಣ್ಣ ಬಾಳ ಸಾರ್ಥಕಗೊಳಿಸಿ ಪ್ರಕೃತಿ ಕೊಟ್ಟ ಹೊಣೆ ಹರಿಸಿ ತಾಯಾದ ಗೌರವ ಗಳಿಸಿ ನಿಂ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...