ವಿಷ ಸಿಂಪಡಿಸಿ
ಶುಚಿಗೊಳಿಸುವಾಗ
ಕಂಡ ನೋಟಕ್ಕೆ
ಹೃದಯ ಮಿಡಿಯಿತು,
ಕೈ ತನ್ನ ಕೆಲಸ ಬಿಟ್ಟಿತು.
ಹೆಣ್ಣು ಜಿರಳೆ
ಮೊಟ್ಟೆ ಇಡುತಿದೆ,
ಅನುಭವಿಸುತಿದೆ
ಪ್ರಸವ ವೇದನೆ.
ಹೆಣ್ಣ ಬಾಳ
ಸಾರ್ಥಕಗೊಳಿಸಿ
ಪ್ರಕೃತಿ ಕೊಟ್ಟ
ಹೊಣೆ ಹರಿಸಿ
ತಾಯಾದ ಗೌರವ ಗಳಿಸಿ
ನಿಂತ ಪ್ರಾಣಿಗೆ
ಅವಕಾಶ ಕಲ್ಪಿಸಿದ
ಸಮಾಧಾನ ನನಗೆ
*****
೧೫-೦೩-೧೯೯೨



















