ಕವಿತೆಯಾಗಿ ನಾನಿದ್ದೆ
ರಾಗವಾಗಿ ನೀನು ಬಂದೆ
ರಾಗವು ಸೇರದೆ ಕವಿತೆಗೆ
ಜೀವ ಬರುವುದೇ ಗೆಳತಿ?

ನನ್ನ ಜೀವದ ಜೀವ ನೀನು
ನೀನಿಲ್ಲದೆ ನಾನಿಲ್ಲ ಇನ್ನು
ಸಂಗೀತದ ಸಾಗರವೇ ನೀನು
ಅದರೊಳಗಿನ ಸ್ವರವಾದೆ ನಾನು

ಕಲಾದೇವಿಯ ಕಂಠ ಸಿರಿ ನೀನು
ಆಲಿಸುವ ಕರಣವಾಗಿ ನಾನು
ಹಂಬಲಿಸುತಿದೆ ನನ್ನ ಮನವು
ಗಟ್ಟಿಯಾಗಿರಲಿ ಗೆಳೆತನ ಅನುದಿನವು.
*****